varthabharthi


ಅಂತಾರಾಷ್ಟ್ರೀಯ

ಚೀನಾ: ಕಲ್ಲಿದ್ದಲು ಗಣಿಯಲ್ಲಿ ವಿಷಾನಿಲ ಸೋರಿಕೆ; 18 ಸಾವು

ವಾರ್ತಾ ಭಾರತಿ : 5 Dec, 2020

ಬೀಜಿಂಗ್ (ಚೀನಾ), ಡಿ. 5: ಚೀನಾದ ಆಗ್ನೇಯ ನಗರ ಚೊಂಗ್‌ಕಿಂಗ್‌ನ ಗಣಿಯೊಂದರಲ್ಲಿ ಅನಿಲ ಸೋರಿಕೆಯಾಗಿ 18 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಕ್ಸಿನುವಾ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.

ದಿಯಾವೊಶುಯಿಡಾಂಗ್ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಕಾರ್ಬನ್ ಮೋನಾಕ್ಸೈಡ್‌ನ ಪ್ರಮಾಣ ಅಗಾಧ ಮಟ್ಟದಲ್ಲಿ ಏರಿಕೆಯಾದ ಬಳಿಕ, 24 ಕಾರ್ಮಿಕರು ಗಣಿಯ ಒಳಗೆ ಸಿಕ್ಕಿಹಾಕಿಕೊಂಡಿದ್ದರು ಎಂದು ಅದು ತಿಳಿಸಿದೆ. ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)