varthabharthi


ರಾಷ್ಟ್ರೀಯ

ಕಾಂಗ್ರೆಸ್ ಸರಕಾರ ಕೆಡವಲು ಬಿಜೆಪಿಯಿಂದ ಮರು ಯತ್ನ:ರಾಜಸ್ಥಾನ ಸಿಎಂ ಗೆಹ್ಲೋಟ್

ವಾರ್ತಾ ಭಾರತಿ : 5 Dec, 2020

 ಜೈಪುರ: ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಬೀಳಿಸಲು  ಬಿಜೆಪಿಯಿಂದ ಮತ್ತೊಂದು ಸುತ್ತಿನ ಪ್ರಯತ್ನ ನಡೆಯುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರಕಾರವನ್ನು ಬೀಳಿಸುವ ಮಾತುಕತೆಯೂ ನಡೆಯುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಇಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಈ ವರ್ಷಾರಂಭದಲ್ಲಿ ಕಾಂಗ್ರೆಸ್ ಶಾಸರಕು 34 ದಿನಗಳ ಕಾಲ ಹೊಟೇಲ್ ನಲ್ಲೇ ಉಳಿದುಕೊಂಡಿದ್ದರು. ಆಗ ಮಾಕೆನ್ (ಅಜಯ್), ರಣದೀಪ್ ಸುರ್ಜೆವಾಲಾ ಹಾಗೂ ಅವಿನಾಶ್ ಪಾಂಡೆ ಅವರು ಬಂದು ನಮ್ಮನ್ನು ಉಳಿಸಿದರು. ರಾಜಸ್ಥಾನದ ಜನತೆಯು ನಮ್ಮ ಸರಕಾರವು ಬೀಳುವುದನ್ನು ಇಷ್ಟಪಡುತ್ತಿಲ್ಲ ಎಂದರು.

ಐದು ಸರಕಾರಗಳು ಉರುಳಿವೆ. ಆರನೇ ಸರಕಾರದ ಹಣೆಬರಹವೂ ಇದೇ ಆಗಿದೆ ಎಂದು ನಾಲ್ಕುತಿಂಗಳ ಹಿಂದೆ ನಮ್ಮಪಕ್ಷದ ಶಾಸಕರನ್ನ ಭೇಟಿಯಾಗಿದ್ದ  ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಸಂಸದ ಝಾಫರ್ ಇಸ್ಲಾಂ ಹೇಳಿದ್ದರು ಎಂದು ಗೆಹ್ಲೋಟ್ ಆರೋಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)