varthabharthi


ರಾಷ್ಟ್ರೀಯ

ವಾರಣಾಸಿ ಕ್ಷೇತ್ರದಲ್ಲಿ 10 ವರ್ಷಗಳ ಬಳಿಕ 2 ಎಂಎಲ್ ಸಿ ಸೀಟು ಸೋತ ಬಿಜೆಪಿ

ವಾರ್ತಾ ಭಾರತಿ : 5 Dec, 2020

ಲಕ್ನೊ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಪದವೀಧರ ಹಾಗೂ ಶಿಕ್ಷಕರಿಗೆ ಮೀಸಲಾಗಿರುವ ಎರಡು ಎಂಎಲ್ ಸಿ ಸ್ಥಾನಗಳಲ್ಲಿ ಸೋಲುವುದರೊಂದಿಗೆ ಹಿನ್ನಡೆ ಅನುಭವಿಸಿದೆ.

ಬಿಜೆಪಿ ಕಳೆದ 10 ವರ್ಷಗಳಿಂದ ಎಂಎಲ್ ಸಿ ಸ್ಥಾನವನ್ನು ಉಳಿಸಿಕೊಂಡಿತ್ತು. ಈ ಬಾರಿ ಈ ಎರಡು ಸ್ಥಾನವನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ.

ಶನಿವಾರ ಸಮಾಜವಾದಿ ಪಕ್ಷದ ಅಶುತೋಶ್ ಸಿನ್ಹಾ ವಾರಣಾಸಿ ವಿಭಾಗದ ಪದವೀಧರ ಕ್ಷೇತ್ರವನ್ನು ಗೆದ್ದುಕೊಂಡರು. ಸಮಾಜವಾದಿ ಪಕ್ಷದ ಲಾಲ್ ಬಿಹಾರಿ ಯಾದವ್ ಶಿಕ್ಷಕರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಮಂಗಳವಾರ ಉತ್ತರಪ್ರದೇಶದ 11  ಎಂ ಎಲ್ ಸಿ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಐದು ಪದವೀಧರರಿಗೆ ಹಾಗೂ ಆರು ಶಿಕ್ಷಕರಿಗೆ ಮೀಸಲಾಗಿತ್ತು. ಮೇಲ್ಮನೆ ಸದಸ್ಯರುಗಳ ಅವಧಿಯು ಮೇ 6 ರಂದು ಮುಕ್ತಾಯವಾಗಿತ್ತು. ಬಿಜೆಪಿ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನೊಂದಿಗೆ ನಂಟಿರುವ ಶಿಕ್ಷಕರ ಸಂಘಟನೆಯು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)