varthabharthi


ಸಿನಿಮಾ

ರಸ್ಸೋ ಸೋದರರ 'ದಿ ಗ್ರೇ ಮ್ಯಾನ್' ಹಾಲಿವುಡ್ ಚಿತ್ರದಲ್ಲಿ ನಟಿಸಲಿರುವ ಧನುಷ್

ವಾರ್ತಾ ಭಾರತಿ : 18 Dec, 2020

ಚೆನ್ನೈ : ಖ್ಯಾತ ತಮಿಳು ನಟ ಧನುಷ್ ಹಾಲಿವುಡ್ ನಿರ್ದೇಶಕರಾದ ಆಂಟನಿ ಮತ್ತು ಜೋ ರಸ್ಸೋ ಅವರ ಮುಂಬರುವ ಥ್ರಿಲ್ಲರ್ ಸಿನೆಮಾ `ದಿ ಗ್ರೇ ಮ್ಯಾನ್'ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ. ಧನುಷ್ ಅವರು 2018ರಲ್ಲಿ ತೆರೆ ಕಂಡ 'ದಿ ಎಕ್ಸ್‍ಟ್ರಾಆರ್ಡಿನರಿ ಜರ್ನಿ ಆಫ್ ದಿ ಫಕೀರ್' ಚಿತ್ರದ ನಾಯಕನಟನಾಗುವ ಮೂಲಕ ಹಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.

'ದಿ ಗ್ರೇ ಮ್ಯಾನ್' ತಾರಾಗಣದಲ್ಲಿರುವ ಏಕೈಕ ಭಾರತೀಯ ನಟರಾಗಿರುವ ಧನುಷ್ ಅವರು ಈ ಚಿತ್ರದಲ್ಲಿ ರ್ಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್, ಆನಾ ಡೆ ಅರ್ಮಾಸ್, ಜೆಸ್ಸಿಕಾ ಹೆನ್ವಿಕ್, ವಾಗ್ನರ್ ಮೌರ ಹಾಗೂ ಜೂಲಿಯಾ ಬಟ್ಟರ್ಸ್ ಜತೆ ಕಾಣಿಸಿಕೊಳ್ಳಲಿದ್ದಾರೆ.

ಮಾರ್ಕ್ ಗ್ರೀನೆ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿ ಈ ಚಿತ್ರ ನಿರ್ಮಿಸಲಾಗುತ್ತಿದೆ. 'ದಿ ಗ್ರೇ ಮ್ಯಾನ್' ನಿರ್ದೇಶಿಸಲಿರುವ ರಸ್ಸೋ ಸಹೋದರರು ಈಗಾಗಲೇ 'ಕ್ಯಾಪ್ಟನ್ ಅಮೆರಿಕಾ' ಮತ್ತು 'ಅವೆಂಜರ್ಸ್' ಸರಣಿ ನಿರ್ದೇಶನಕ್ಕಾಗಿ ಹೆಸರು ಪಡೆದವರು.

ಈ 200 ಮಿಲಿಯನ್ ಡಾಲರ್ ಬಜೆಟ್ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಆರಂಭಗೊಳ್ಳಲಿರುವ ನಿರೀಕ್ಷೆಯಿದ್ದು ಯುರೋಪ್‍ನಾದ್ಯಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವ ಮಾಜಿ ಸಿಐಎ ಏಜಂಟ್ ಹಾಗೂ ಬಾಡಿಗೆ ಹಂತಕನೊಬ್ಬನ ಕಥಾಹಂದರ ಈ ಚಿತ್ರ ಹೊಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)