ಗಲ್ಫ್ ಸುದ್ದಿ
ಕತರ್ಗೆ ಮೊದಲ ಹಂತದ ಫೈಝರ್ ಲಸಿಕೆ ಸೋಮವಾರ ಆಗಮನ
ವಾರ್ತಾ ಭಾರತಿ : 19 Dec, 2020

ದೋಹಾ (ಕತರ್), ಡಿ. 19: ಕತರ್ ತನ್ನ ಮೊದಲ ಹಂತದ ಕೊರೋನ ವೈರಸ್ ಲಸಿಕೆಯನ್ನು ಸೋಮವಾರ ಸ್ವೀಕರಿಸಲಿದೆ ಎಂದು ದೇಶದ ಪ್ರಧಾನಿ ಶೇಖ್ ಖಾಲಿದ್ ಬಿನ್ ಖಲೀಫ ಬಿನ್ ಅಬ್ದುಲ್ಲಝೀಝ್ ಅಲ್ ಥಾನಿ ಶನಿವಾರ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
‘‘ಅಮೀರ್ ಆದೇಶದಂತೆ, ಫೈಝರ್-ಬಯೋಎನ್ಟೆಕ್ ಕೋವಿಡ್-19 ಲಸಿಕೆಯ ಮೊದಲ ಸರಕು ಸೋಮವಾರ ಆಗಮಿಸಲಿದೆ. ನಮ್ಮ ಆರೋಗ್ಯ ಗುಣಮಟ್ಟಕ್ಕೆ ಅನುಸಾರವಾಗಿ ಪ್ರತಿಯೊಬ್ಬರಿಗೂ ಲಸಿಕೆಯನ್ನು ನೀಡುವಂತೆ ನಾನು ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ’’ ಎಂದು ಅವರು ಹೇಳಿದರು.
ವೃದ್ಧರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಫೈಝರ್ ಲಸಿಕೆಯನ್ನು ಪಡೆಯುವ ಮೊದಲಿಗರಾಗಿರುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)