varthabharthi


ನಿಮ್ಮ ಅಂಕಣ

ಮತ್ತೆ ಸಂವಿಧಾನದ ಕಡೆಗಣನೆ

ವಾರ್ತಾ ಭಾರತಿ : 24 Dec, 2020
-ಲಕ್ಷ್ಮೀಕಾಂತ್ ಕೆ. ರಾವ್, ಮೈಸೂರು

ಮಾನ್ಯರೇ,

ಭಾರತದಲ್ಲಿ ಸಂವಿಧಾನವೇ ಪರಮೋಚ್ಚ ಹಾಗೂ ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ಬಾಯಿಮಾತಿನಲ್ಲಿ ಎಲ್ಲರೂ ಹೇಳುತ್ತಾರೆ, ಆದರೆ ಕೃತಿಯಲ್ಲಿ ಹಾಗೆ ಭಾವಿಸುವುದಿಲ್ಲ ಎಂಬುದಕ್ಕೆ ಸಾಕ್ಷಿ ಕೇಂದ್ರ ಸರಕಾರ ಈಗ ಕಟ್ಟಿಸುತ್ತಿರುವ ಹೊಸ ಸಂಸತ್ ಭವನ ಸೆಂಟ್ರಲ್ ವಿಸ್ಟಾ! ದೇಶದ ಎಲ್ಲ ಜನರ ವಿರೋಧವನ್ನು ಧಿಕ್ಕರಿಸಿ ಈ ಹೊಸ ಸಂಸತ್ ಭವನಕ್ಕೆ ಮೋದಿ ಶಿಲಾನ್ಯಾಸ ಮಾಡಿದರು. ಆದರೆ ಇಲ್ಲಿಯೂ ಸಂವಿಧಾನವನ್ನು ಕಡೆಗಣಿಸಲಾಯಿತು. ನಮ್ಮ ಸಂವಿಧಾನದ ಪ್ರಕಾರ, ದೇಶದ ಪರಮೋಚ್ಚ ಅಧಿಕಾರವುಳ್ಳ ವ್ಯಕ್ತಿ ಹಾಗೂ ಸಂಸದೀಯ ಮುಖ್ಯಸ್ಥರೆಂದರೆ ರಾಷ್ಟ್ರಪತಿ. ಹಾಗಿದ್ದರೂ ಹೊಸ ಸಂಸತ್ ಭವನಕ್ಕೆ ಭೂಮಿಪೂಜೆ ಮಾಡುವಾಗ ದೇಶದ ಪರಮೋಚ್ಚ ಸಂಸದೀಯ ಮುಖ್ಯಸ್ಥರಾದ ರಾಷ್ಟ್ರಪತಿ ಅಲ್ಲಿ ಇರಲೇ ಇಲ್ಲ! ಅದಕ್ಕೆ ಕಾರಣ ನಮ್ಮ ಈಗಿನ ರಾಷ್ಟ್ರಪತಿ ಕೋವಿಂದರು ದಲಿತರಾಗಿರುವುದು! ಮೋದಿಯವರು ವೈಶ್ಯ ಮೇಲ್ಜಾತಿಯವರಾಗಿದ್ದರಿಂದ ಅವರ ಕೈಯಲ್ಲಿ ಹೊಸ ಸಂಸತ್ ಭವನದ ಭೂಮಿಪೂಜೆ ಮಾಡಿಸಲಾಯಿತು (ಅರ್ಥಾತ್ ಮೋದಿ ಈ ಕಾರ್ಯವನ್ನು ಜಬರ್ದಸ್ತಿ ತಮಗೆ ತಾವೇ ವಹಿಸಿಕೊಂಡರು!) ಎಂಬ ಆರೋಪ ಎದ್ದಿದೆ. ಜನಪ್ರತಿನಿಧಿಗಳ ಪವಿತ್ರ ದೇಗುಲವಾದ ಸಂಸತ್ತಿನ ವಿಷಯದಲ್ಲೂ ಇಂತಹ ಹೀನ ಜಾತಿಭೇದ ಸರಿಯೇ?

-ಲಕ್ಷ್ಮೀಕಾಂತ್ ಕೆ. ರಾವ್, ಮೈಸೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)