ಎಂ.ರಾಘವೇಂದ್ರ ಶೆಟ್ಟಿಗಾರ್
ಉಡುಪಿ, ಡಿ.25: ಉಡುಪಿ ಜಿಲ್ಲಾ ಖಜಾನಾಧಿಕಾರಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿದ್ದ ಮಟಪಾಡಿ ರಾಘವೇಂದ್ರ ಶೆಟ್ಟಿಗಾರ್ (77) ಅವರು ಗುರುವಾರ ಬ್ರಹ್ಮಾವರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ರಾಘವೇಂದ್ರ ಶೆಟ್ಟಿಗಾರ್ ಇವರು ಮಂಗಳೂರು, ಶಿವಮೊಗ್ಗ, ಕಾರ್ಕಳ, ಹೆಬ್ರಿಗಳಲ್ಲಿ ಉಪ ಖಜಾನಾಧಿಕಾರಿಯಾಗಿ ಸೇವೆ ಸಲ್ಲಿಸಿ ಪದೋನ್ನತಿಗೊಂಡು ಜಿಲ್ಲಾ ಖಜಾನಾಧಿಕಾರಿಯಾಗಿ ಉಡುಪಿಯಲ್ಲಿ ಸೇವೆ ಸಲ್ಲಿಸಿದ್ದರು.
Next Story