ಸಿನಿಮಾ
ಎ.ಆರ್. ರಹ್ಮಾನ್ ತಾಯಿ ಕರೀಮಾ ಬೇಗಂ ನಿಧನ
ವಾರ್ತಾ ಭಾರತಿ : 28 Dec, 2020

ಚೆನ್ನೈ: ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಅವರ ತಾಯಿ ಕರೀಮಾ ಬೇಗಂ ಇಂದು ಚೆನ್ನೈಯಲ್ಲಿ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಟ್ವಿಟ್ಟರ್ನಲ್ಲಿ ತನ್ನ ತಾಯಿಯ ಫೋಟೊವನ್ನು ಹಂಚಿಕೊಂಡಿರುವ ರಹ್ಮಾನ್ ತನ್ನ ತಾಯಿಯ ನಿಧನದ ಸುದ್ದಿಯನ್ನು ಖಚಿತಪಡಿಸಿದರು.
ರಹ್ಮಾನ್ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ತಾಯಿಯ ಫೋಟೊ ಹಂಚಿಕೊಂಡ ತಕ್ಷಣ ಎಲ್ಲೆಡೆಯಿಂದ ಸಂತಾಪಗಳು ವ್ಯಕ್ತವಾದವು. ಟ್ವಿಟ್ಟರ್ ಬಳಕೆದಾರರು ರಹ್ಮಾನ್ ಅವರೊಂದಿಗಿದ್ದ ಕರೀಮಾ ಬೇಗಂ ಫೋಟೊ ಹಂಚಿಕೊಂಡು ಅಂತಿಮ ಗೌರವ ಸಲ್ಲಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)