ಅವಕಾಶಕ್ಕಾಗಿ ಶಾರೂಖ್ ಖಾನ್ ಮನೆ ಮುಂದೆ ಪೋಸ್ಟರ್ ಹಿಡಿದು ನಿಂತ ಕನ್ನಡ ನಿರ್ದೇಶಕ
ಹೊಸದಿಲ್ಲಿ: ತನ್ನ ಕನಸಿನ ಸಿನೆಮಾದ ಕಥೆ ಹೇಳಲು ಅವಕಾಶ ಕೋರಿ ಕನ್ನಡದ ನಿರ್ದೇಶಕರೊಬ್ಬರು ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಮನೆ ಮುಂದೆ ನಿಂತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.
ಕನ್ನಡ ನಿರ್ದೇಶಕ ಜಯಂತ್ ಸೀಗೆ ಅವರು ತಾವು ಪ್ಲಕಾರ್ಡ್ ಹಿಡಿದು ಶಾರೂಖ್ ಮನೆ ಮುಂದೆ ನಿಂತಿರುವ ಫೋಟೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಅವರು, “2020ನ್ನು ಈ ರೀತಿ ಕೊನೆಗೊಳಿಸುತ್ತಿದ್ದೇನೆ. ಪ್ರೊಜೆಕ್ಟ್ ಎಕ್ಸ್ ಎನ್ನುವ ಕನಸಿನ ಬಗ್ಗೆ ವಿವರಿಸಲು ನಾನು ಗಮನ ಸೆಳೆಯುವುದಕ್ಕಾಗಿ ಶಾರೂಖ್ ಖಾನ್ ಮನೆಯ ಹೊರಗಡೆ ನಿಂತಿದ್ದೇನೆ. ಅವರು ನಗರದಲ್ಲಿ ಇರದೇ ಇರಬಹುದು. ಆದರೆ ಯಾರಾದರೂ ಇದನ್ನು ಅವರಿಗೆ ತಲುಪಿಸಿ. ಧನ್ಯವಾದಗಳು ಮತ್ತು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಹೇಳಿದ್ದಾರೆ.
Next Story