ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆಯ ಎಲ್ಲ ಪೋಸ್ಟ್ಗಳನ್ನು ಅಳಿಸಿದ ದೀಪಿಕಾ ಪಡುಕೋಣೆ
ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನವೇ ನಟಿ ದೀಪಿಕಾ ಪಡುಕೋಣೆ ತನ್ನ ಎಲ್ಲಾ ಟ್ವೀಟ್ಗಳನ್ನು ಹಾಗೂ ಇನ್ಸ್ಟಾಗ್ರಾಮ್ ಪೋಸ್ಟ್ಗಳನ್ನು ಅಳಿಸಿ ಹಾಕುವ ಮೂಲಕ ತನ್ನೆಲ್ಲಾ ಅಭಿಮಾನಿಗಳಿಗೆ ಆಘಾತ ನೀಡಿದರು.
ದೀಪಿಕಾ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಕೆಲವು ಜನರು ಊಹಾಪೋಹ ಹಬ್ಬಿಸಿದರು. ನಟಿಯ ಆಪ್ತ ಮೂಲವು ಇಂತಹ ವದಂತಿ ನಿಜವಲ್ಲ ಎಂದು ದೃಢಪಡಿಸಿತು ಎಂದು ವರದಿಯಾಗಿದೆ.
ನಟಿ ದೀಪಿಕಾ ಅವರಿಗೆ ಟ್ವಿಟರ್ನಲ್ಲಿ 27.4 ಮಿಲಿಯನ್ ಫಾಲೋವರ್ಸ್ಗಳು ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ 52.5 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ.
Next Story