varthabharthi


ರಾಷ್ಟ್ರೀಯ

ಸ್ಮಶಾನದ ಮೇಲ್ಛಾವಣಿ ಕುಸಿತ: ಅಂತ್ಯಕ್ರಿಯೆಗೆಂದು ಬಂದಿದ್ದ 22 ಮಂದಿ ಮೃತ್ಯು

ವಾರ್ತಾ ಭಾರತಿ : 3 Jan, 2021

ಮುರಾದ್ ನಗರ್: ಉತ್ತರಪ್ರದೇಶದ ಮುರಾದ್ ನಗರ್ ಸಿಟಿಯಲ್ಲಿ ಮಳೆಯಿಂದಾಗಿ ಸ್ಮಶಾನವೊಂದರ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಅಂತ್ಯಕ್ರಿಯೆಗಾಗಿ ಬಂದಿದ್ದ 22 ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು NDTV  ವರದಿ ಮಾಡಿದೆ.

ಘಟನೆಯ ವೇಳೆ ಡಝನ್ ಗಟ್ಟಲೆ ಜನರು ಛಾವಣಿಯ ಅಡಿ ಇದ್ದರು. 38 ಜನರನ್ನು ರಕ್ಷಿಸಲಾಗಿದೆ. ಕೆಲವರು ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಇದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿ ಆರ್ ಎಫ್)ಸ್ಥಳಕ್ಕೆ ಧಾವಿಸಿದೆ. ಗಾಯಗೊಂಡಿರುವ ಹಲವರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ  ಬಗ್ಗೆ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ರಾಜ್ಯ ಸರಕಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)