varthabharthi


ನಿಮ್ಮ ಅಂಕಣ

ಕನ್ನಡಿಗರಿಗೆ ರೈಲು ದರದಲ್ಲಿ ಅನ್ಯಾಯ

ವಾರ್ತಾ ಭಾರತಿ : 7 Jan, 2021
-ಒಲಿವರ್ ಡಿ’ಸೋಜಾ, ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೆ ಯಾತ್ರಿ ಸಂಘ, ಮುಂಬೈ

ಮಾನ್ಯರೇ,

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಾಸ್ತವಿಕ ದೂರ 835 ಕಿಲೋಮೀಟರ್‌ನ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಹೋಗುವ ಮತ್ಸಗಂಧ ರೈಲಿನ ಸ್ಲೀಪರ್‌ಗೆ ರೂ. 720 ದರವಿದೆ.
ನನಗೆ ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಮಂಗಳೂರಿಗೆ ಟಿಕೆಟ್ ಸಿಗದ ಕಾರಣ 1,599 ಕಿಲೋ ಮೀಟರ್ ದೂರದ ಎರ್ನಾಕುಲಂ ತನಕದ ಸ್ಲೀಪರ್ ಟಿಕೆಟ್ ಬುಕ್ಕಿಂಗ್ ಮಾಡಿದಾಗ ಆಶ್ಚರ್ಯ ಕಾದಿತ್ತು. ಟಿಕೆಟ್ ದರ ಕೇವಲ 665 ರೂ.
ಅಂದರೆ 1599-835=764 ಕಿಲೋ ಮೀಟರ್ ಹೆಚ್ಚುವರಿ ಪ್ರಯಾಣಿಸಿದರೆ ಟಿಕೆಟ್ ದರ ಇನ್ನೂ 55 ರೂ. ಕಡಿಮೆ!.
ರೈಲುಯಾತ್ರಿ ಸಂಘದವರಿಗೆ, ಪ್ರಯಾಣಿಕರಿಗೆ ಇದರ ಬಗ್ಗೆ ತಿಳಿದಿದೆಯೇ? ಕೇರಳದಿಂದ ಬರುವ ಹಾಗೂ ಕೇರಳಕ್ಕೆ ಹೋಗುವ ರೈಲುಗಳನ್ನು ಕೇವಲ ಎಕ್ಸ್‌ಪ್ರೆಸ್ ರೈಲುಗಳಾಗಿ ಮಾಡಿ ಕಡಿಮೆ ದರಕ್ಕೆ ಪ್ರಯಾಣಿಸಬಹುದು. ಮಂಗಳೂರಿಗೆ ಬರುವ ಮತ್ಸಗಂಧ ಹಾಗೂ ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳಿಗೆ ‘ಸೂಪರ್‌ಫಾಸ್ಟ್’ ಎಂಬ ಹೆಸರು ಕೊಟ್ಟು ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಈ ಹಗಲು ದರೋಡೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಿಸಬೇಕಾಗಿದೆ. ಕೇರಳದವರು ಕೊಂಕಣ ರೈಲು ಹಳಿ ಹಾಕಲು ತಮ್ಮ ಜಮೀನು ಕೊಟ್ಟಿಲ್ಲ. ಕರ್ನಾಟಕದ ಕನ್ನಡಿಗರು ನೀಡಿದ್ದಾರೆ. ಆದರೂ ಎಲ್ಲಾ ಅನುಕೂಲತೆಗಳು ಕೇರಳಿಗರಿಗೆ. ಹೀಗೆ ಕನ್ನಡಿಗರಿಗೆ ರೈಲುದರದಲ್ಲಿ ಅನ್ಯಾಯವಾಗುತ್ತಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು