varthabharthi


ನಿಮ್ಮ ಅಂಕಣ

ಕಡಿತಗೊಂಡ ಪಠ್ಯಗಳ ಬಗ್ಗೆ ಮಾಹಿತಿಯಿಲ್ಲ

ವಾರ್ತಾ ಭಾರತಿ : 8 Jan, 2021
-ಅನೀಶ್.ಬಿ., ಕೊಪ್ಪ, ಚಿಕ್ಕಮಗಳೂರು

ಮಾನ್ಯರೇ,

ಕಳೆದ ಮಾರ್ಚ್‌ನಲ್ಲಿ ಮುಚ್ಚಿದ ಶಾಲಾ-ಕಾಲೇಜುಗಳ ಬಾಗಿಲುಗಳು, ಬರೋಬ್ಬರಿ ಒಂಭತ್ತು ತಿಂಗಳುಗಳ ನಂತರ ಮತ್ತೆ ತೆರೆದುಕೊಂಡಿವೆ. ಹಾಗೆಯೇ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಡೆಸಲು ಮಾನ್ಯ ಶಿಕ್ಷಣ ಸಚಿವರು ದಿನ ನಿಗದಿ ಮಾಡಿದ್ದಾರೆೆ. ಈ ಶೈಕ್ಷಣಿಕ ವರ್ಷ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲದ ಕಾರಣ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಶಾಲಾ ದಿನಗಳಿಗನು ಗುಣವಾಗಿ ಪಠ್ಯಗಳನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದು, ಅದು ಅನಿವಾರ್ಯವೂ ಕೂಡ ಹೌದು. ಆದರೆ, ಶಾಲಾರಂಭವಾಗಿ ಒಂದು ವಾರವಾದರೂ, ಅಧಿಕೃತವಾಗಿ ಕಡಿತಗೊಂಡ ಪಠ್ಯಗಳ ಬಗೆಗಿನ ಮಾಹಿತಿಯು ಇನ್ನೂ ತಲುಪಿಲ್ಲವೆಂಬ ಮಾತು ಶಾಲೆಗಳಲ್ಲಿ ಕೇಳಿಬರುತ್ತಿದೆ. ಹೀಗಾಗಿ ಆನ್‌ಲೈನ್ ಪಾಠ ಮತ್ತು ಶಾಲಾ ಪಾಠದ ಅವಧಿಯಲ್ಲಿ ಮಾಡಿದ ಪಾಠಗಳು ಕಡಿತಗೊಂಡರೆ, ಮಕ್ಕಳ ಓದು ಮತ್ತು ಬರವಣಿಗೆಯ ಸಮಯವು ಅಪವ್ಯಯವಾದಂತಾಗುತ್ತದೆ. ಆದಷ್ಟು ಬೇಗ ಕಡಿತಗೊಂಡ ಪಠ್ಯಗಳ ಬಗೆಗಿನ ಅಧಿಕೃತ ಮಾಹಿತಿಯನ್ನು ಶಿಕ್ಷಕರಿಗೆ ಮತ್ತು 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಿದರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಕೊಂಚ ಸುಲಭವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)