varthabharthi


ರಾಷ್ಟ್ರೀಯ

60 ರೈತರ ಸಾವಿನಿಂದ ಸರಕಾರಕ್ಕೆ ಮುಜುಗರವಾಗಿಲ್ಲ, ಆದರೆ ಟ್ರ್ಯಾಕ್ಟರ್ ರ‍್ಯಾಲಿಯಿಂದ ಮುಜುಗರವಾಗಿದೆ: ರಾಹುಲ್ ವ್ಯಂಗ್ಯ

ವಾರ್ತಾ ಭಾರತಿ : 13 Jan, 2021

ಹೊಸದಿಲ್ಲಿ,ಜ.13:  ಗಣರಾಜ್ಯೋತ್ಸವದ ದಿನ ಪ್ರತಿಭಟನಾನಿರತ ರೈತರು ನಡೆಸಲುದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿ ವಿರುದ್ಧ  ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿರುವ ಅಫಿಡವಿಟ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

"60ಕ್ಕೂ ಹೆಚ್ಚು ರೈತರು (ಅನ್ನದಾತರು) ಹುತಾತ್ಮರಾಗಿರುವುದು ಸರಕಾರಕ್ಕೆ ಮುಜುಗರ ಸೃಷ್ಟಿಸಿಲ್ಲ ಆದರೆ ಟ್ರ್ಯಾಕ್ಟರ್ ರ‍್ಯಾಲಿಯಿಂದ ಮೋದಿ ಸರಕಾರಕ್ಕೆ ಮುಜುಗರವಾಗಿದೆ," ಎಂದು  ರಾಹುಲ್ ಟ್ವೀಟ್ ಮಾಡಿದ್ದಾರೆ.

ಗಣರಾಜ್ಯೋತ್ಸವದ ಪೆರೇಡ್‍ಗೆ  ಅಡ್ಡಿಯುಂಟಾದರೆ ಅದು ದೇಶಕ್ಕೆ ಮುಜುಗರ ಸೃಷ್ಟಿಸಲಿದೆ" ಎಂದು ಕೇಂದ್ರ ಸರಕಾರ ತನ್ನ ಅಫಿಡವಿಟ್‍ನಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)