varthabharthi


ಅಂತಾರಾಷ್ಟ್ರೀಯ

ಇಬ್ಬರು ಹಫೀಝ್ ಸಹಚರರಿಗೆ 15 ವರ್ಷ ಜೈಲು

ವಾರ್ತಾ ಭಾರತಿ : 13 Jan, 2021

ಲಾಹೋರ್ (ಪಾಕಿಸ್ತಾನ), ಜ. 13: ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಮಂಗಳವಾರ ಭಯೋತ್ಪಾದನೆಗೆ ಹಣ ಪೂರೈಸಿದ ಪ್ರಕರಣದಲ್ಲಿ, ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಾಗೂ ನಿಷೇಧಿತ ಜಮಾಅತುದಅವಾ ಎಂಬ ಹೆಸರಿನ ಗುಂಪಿನ ಮುಖ್ಯಸ್ಥ ಹಫೀಝ್ ಸಯೀದ್‌ನ ಇಬ್ಬರು ಅನುಯಾಯಿಗಳಿಗೆ ತಲಾ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅದೇ ವೇಳೆ, ಸಯೀದ್‌ನ ಭಾವ ಅಬ್ದುಲ್ ರೆಹಮಾನ್ ಮಕ್ಕಿಗೂ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

‘‘ಪಂಜಾಬ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ಇಲಾಖೆಯು ದಾಖಲಿಸಿದ ಪ್ರಕರಣದಲ್ಲಿ, ನ್ಯಾಯಾಧೀಶ ಅರ್ಶದ್ ಹುಸೈನ್ ಭಟ್ಟ್, ಯಾಹ್ಯಾ ಮುಜಾಹಿದ್ ಮತ್ತು ಝಫರ್ ಇಕ್ಬಾಲ್‌ಗೆ ತಲಾ 15 ವರ್ಷಗಳ ಜೈಲು ಶಿಕ್ಷೆ ಮತ್ತು ಪ್ರೊಫೆಸರ್ ಅಬ್ದುಲ್ ರೆಹಮಾನ್ ಮಕ್ಕಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ’’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಬುಧವಾರ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)