varthabharthi


ರಾಷ್ಟ್ರೀಯ

‘ಬೇಟಿ ಬಚಾವೊ’, ‘ಮಿಷನ್ ಶಕ್ತಿ’ ಪೊಳ್ಳು ಘೋಷಣೆ: ಪ್ರಿಯಾಂಕಾ ಗಾಂಧಿ ವಾದ್ರಾ

ವಾರ್ತಾ ಭಾರತಿ : 13 Jan, 2021

ಹೊಸದಿಲ್ಲಿ, ಜ. 12: ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ಮಹಿಳೆಯರ ಭದ್ರತೆ ಕುರಿತು ಪ್ರಚಾರ ನಡೆಸಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ, ತಳ ಮಟ್ಟದಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯದ ಮನೋಭಾವ ಹೊಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಹಿಂದಿ ಪೋಸ್ಟ್‌ನಲ್ಲಿ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧದ ಕುರಿತ ಇತ್ತೀಚೆಗಿನ ವರದಿಯನ್ನು ಉಲ್ಲೇಖಿಸಿದ್ದಾರೆ. ‘‘ಬೇಟಿ ಬಚಾವೊ’’ ಹಾಗೂ ‘ಮಿಷನ್ ಶಕ್ತಿ’ ಉತ್ತರಪ್ರದೇಶ ಸರಕಾರದ ಕೇವಲ ಪೊಳ್ಳು ಘೋಷಣೆಗಳು ಎಂದು ಅವರು ಹೇಳಿದ್ದಾರೆ. ‘‘ಉತ್ತರಪ್ರದೇಶದ ಸರಕಾರ ಮಹಿಳೆಯರ ಭದ್ರತೆಯ ಮಿಷನ್ ಶಕ್ತಿ ಹೆಸರಲ್ಲಿ ತಪ್ಪು ಪ್ರಚಾರಕ್ಕೆ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ತಳ ಮಟ್ಟದಲ್ಲಿ ಮಹಿಳೆಯರ ಭದ್ರತೆ ಬಗ್ಗೆ ನಿರ್ಲಕ್ಷ್ದ ಮನೋಭಾವ ಹೊಂದಿದೆ’’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ಗೋರಖ್‌ಪುರದಲ್ಲಿ ಇತ್ತೀಚೆಗೆ 12 ಮಹಿಳೆಯರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ ಎಂದರು. ‘‘ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ಪ್ರತಿ ದಿನ ಸರಾಸರಿ 165 ಅಪರಾಧಗಳು ಸಂಭವಿಸುತ್ತಿವೆ. ಇತ್ತೀಚೆಗೆ ನೂರಾರು ಪ್ರಕರಣಗಳು ಬೆಳಕಿಗೆ ಬಂದವು. ಆದರೆ, ಆಡಳಿತ ಸಂತ್ರಸ್ತರ ಮಾತನ್ನು ಆಲಿಸಲಿಲ್ಲ. ಅವರು ದೂರುದಾರರೊಂದಿಗೆ ದುರ್ನಡತೆ ತೋರಿದರು’’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ಮಹಿಳೆಯರ ಭದ್ರತೆ ಹೆಸರಲ್ಲಿ ಜಾಹೀರಾತಿಗೆ ಉತ್ತರಪ್ರದೇಶ ಸರಕಾರ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೆ, ಅವರ ಬಗೆ ತುಚ್ಛವಾಗಿ ಮಾತನಾಡಲಾಗುತ್ತದೆ. ಅವರ ಬಗ್ಗೆ ಅನುಕಂಪ ತೋರುವ ಬದಲು ಅಗೌರವ ತೋರಿಸಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)