varthabharthi


ಕರ್ನಾಟಕ

ಸೋತವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ರೋಶ: ವರಿಷ್ಠರ ಮೊರೆ ಹೋಗಲಿರುವ ಶಾಸಕ ರೇಣುಕಾಚಾರ್ಯ

ವಾರ್ತಾ ಭಾರತಿ : 14 Jan, 2021

ಬೆಂಗಳೂರು, ಜ.14: ಜಾತಿ ರಾಜಕೀಯ ಮಾಡಿ ನನಗೆ ಅಭ್ಯಾಸವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಿದ್ದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸರ್ವ ಜನಾಂಗದ ಮತದಾರರಿಗೆ ಮಾಡಿದ ಅಪಮಾನ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯೆ ನನ್ನ ಧ್ಯೇಯ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಸರ್ಕಾರ ಕೇವಲ 2 ಜಿಲ್ಲೆಗೆ ಮಾತ್ರ ಸೀಮಿತವಾಗಬಾರದು. ನಾಯಕತ್ವ ಮತ್ತು ಸಂಘಟನೆ ನನಗೆ ಎಲ್ಲಾ ಸ್ಥಾನ-ಮಾನ ನೀಡಿದೆ. ಸೋತವರಿಗೆ, ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರ ಬಗ್ಗೆ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕಷವಾಗಿ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸಚಿವ ಸ್ಥಾನ ಸಿಗಲಿಲ್ಲವೆಂದು ಸಹಜವಾಗಿ ಅಘಾತವಾಗಿದೆ. ನಾಯಕತ್ವ ಮತ್ತು ಪಕ್ಷದ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದೇನೆ. ಮಂದೆಯೂ ಇಡುತ್ತೇನೆ. ನನ್ನ ಹೋರಾಟ ಪಕ್ಷ ಮತ್ತು ನಾಯಕತ್ವದ ವಿರುದ್ಧವಲ್ಲ. ಈಗ ಸರ್ಕಾರದಲ್ಲಾಗಿರುವ ತಪ್ಪು ವ್ಯವಸ್ಥೆ ವಿರುದ್ಧ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೆದ್ದ ಶಾಸಕರಿಗೆ, ಮತದಾನ ಮಾಡಿದ ಮತದಾರರಿಗೆ ಮಾಡಿದ ಅವಮಾನವಿದು ಎಂದು ಅವರು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)