varthabharthi


ನಿಮ್ಮ ಅಂಕಣ

ಮತ್ತೊಂದು ಭಜನಾ ಮಂಡಳಿಯಾಗದಿರಲಿ

ವಾರ್ತಾ ಭಾರತಿ : 14 Jan, 2021
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಬಸವಣ್ಣನವರ ಅನುಭವ ಮಂಟಪದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದ ಅನೇಕರು ಬಸವಣ್ಣನವರ ಆಶಯಗಳನ್ನು ಧಿಕ್ಕರಿಸಿದವರೇ ಆಗಿದ್ದರು. ಜಾತಿ ಬಿಡಿ ಎಂದು ಬಸವಣ್ಣ ಹೇಳಿದರೆ. ಜಾತಿ ಹೆಸರಿನಲ್ಲಿ ಮತ ಕೇಳುವ ನಾಯಕರು, ಸಾಮಾಜಿಕ ನ್ಯಾಯದ ಮಾತನಾಡಿದ ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ಪಂಗಡಕ್ಕೊಂದು ಮಠ ಕಟ್ಟಿಕೊಳ್ಳುತ್ತಿರುವ ಮಠಾಧೀಶರು ಇವರೆಲ್ಲರಿಂದ ಭೂಮಿ ಪೂಜೆ ಆಗುವುದರ ಬದಲಿಗೆ ಅನುಭವ ಮಂಟಪದಲ್ಲಿ ಬಸವಣ್ಣನವರೊಂದಿಗಿದ್ದ ವಚನಕಾರರ ವರ್ಗಕ್ಕೆ ಸೇರಿದ್ದ ಮಡಿವಾಳರಿಂದಲೂ, ಕ್ಷೌರಿಕರಿಂದಲೂ, ನೇಕಾರರಿಂದಲೂ, ಚಮ್ಮಾರರಿಂದಲೂ ಅಥವಾ ದಲಿತರಿಂದಲೂ ಭೂಮಿ ಪೂಜೆಯನ್ನು ಮಾಡಿಸಿದ್ದರೆ ಅದು ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತಿತ್ತು. ಈಗ ಕಟ್ಟುತ್ತಿರುವ ಬಸವಣ್ಣನವರ ಅನುಭವ ಮಂಟಪ ಕೋಮುವಾದವನ್ನು ಬಿಂಬಿಸುವ ಮಂಟಪವಾಗದಿರಲಿ ಅಥವಾ ಮೌಢ್ಯಗಳನ್ನು ವೈಭವೀಕರಿಸುವ ಆಲಯ ಆಗದಿರಲಿ, ವ್ಯಕ್ತಿ ಪೂಜೆ ಮಾಡುವ ಭಜನಾ ಮಂಡಳಿಯೂ ಆಗದಿರಲಿ ಎಂಬುದೇ ನಮ್ಮ ಆಶಯ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ಬಸವಣ್ಣನವರ ಅನುಭವ ಮಂಟಪಕ್ಕೆ ಎಲ್ಲಾ ಕನ್ನಡಿಗರಿಂದ ನಿಧಿ ಸಂಗ್ರಹಿಸಿ ಅದನ್ನು ನಿರ್ಮಿಸಿದರೆ ನಿಜಕ್ಕೂ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಇಲ್ಲದಿದ್ದರೆ ಸರಕಾರಿ ಕೃಪಾಪೋಷಿತ ಭಜನಾ ಮಂಡಳಿಯಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)