ಭಾರತದಿಂದ ಪರಿಣಾಮಕಾರಿ ಕೊರೋನ ನಿಗ್ರಹ ಕ್ರಮ: ಐಎಂಎಫ್
ವಾಶಿಂಗ್ಟನ್, ಜ. 15: ಕೊರೋನ ವೈರಸ್ ಸಾಂಕ್ರಾಮಿಕ ಮತ್ತು ಅದರ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಲು ತೆಗೆದುಕೊಂಡಿರುವ ‘ಅತ್ಯಂತ ನಿರ್ಣಾಯಕ’ ಕ್ರಮಗಳಿಗಾಗಿ ಅಂತರ್ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿಯೇವ ಭಾರತವನ್ನು ಶ್ಲಾಘಿಸಿದ್ದಾರೆ ಹಾಗೂ ಆರ್ಥಿಕತೆಯನ್ನು ಬಲಪಡಿಸುವ ಕ್ರಮಗಳನ್ನು ಬೆಂಬಲಿಸಲು ಈ ವರ್ಷ ಹೆಚ್ಚಿನದನ್ನು ಮಾಡುವಂತೆ ಅವರು ದೇಶಕ್ಕೆ ಕರೆ ನೀಡಿದ್ದಾರೆ.
ಐಎಂಎಫ್ ಜನವರಿ 26ರಂದು ಬಿಡುಗಡೆಗೊಳಿಸಲಿರುವ ವಿಶ್ವ ಆರ್ಥಿಕ ವರದಿಗೆ ಪೂರ್ವಭಾವಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.
Next Story