ಥಾಯ್ಲೆಂಡ್ ಓಪನ್: ಮರಿನ್, ಆಕ್ಸೆಲ್ಸೆನ್ ಚಾಂಪಿಯನ್
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಮಹಿಳೆಯರ ಸಿಂಗಲ್ಸ್ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಕೆರೊಲಿನಾ ಮರಿನ್ ಮತ್ತು ಪುರುಷರ ಸಿಂಗಲ್ಸ್ನಲ್ಲಿ ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸೆನ್ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಈ ಗೆಲುವಿನೊಂದಿಗೆ ಮರಿನ್ ಈ ವರ್ಷದ ಕೊನೆಯಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅವಕಾಶವನ್ನು ಹೆಚ್ಚಿಸಿಕೊಂಡಿದ್ದಾರೆ.
ನಾಲ್ಕನೇ ಶ್ರೇಯಾಂಕದ ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸೆನ್ ಪುರುಷರ ಫೈನಲ್ನಲ್ಲಿ ಹಾಂಕಾಂಗ್ನ ಆಂಗಸ್ ಲಾಂಗ್ ವಿರುದ್ಧ 21-14, 21-14 ನೇರ ಸೆಟ್ಗಳಲ್ಲಿ ಜಯಿಸಿ ಪ್ರಶಸ್ತಿಯನ್ನು ಪಡೆದರು.
ಮರಿನ್ 42 ನಿಮಿಷಗಳ ಆಟದಲ್ಲಿ ತೈವಾನ್ನ ಅಗ್ರ ಶ್ರೇಯಾಂಕದ ತೈ ಝು ಯಿಂಗ್ ವಿರುದ್ಧ 21-9, 21-16 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ಬಾಚಿಕೊಂಡರು.
ಆಕ್ಸೆಲ್ಸೆನ್ ಕೇವಲ 44 ನಿಮಿಷಗಳಲ್ಲಿ ಎದುರಾಳಿ ಲಾಂಗ್ ವಿರುದ್ಧ ಜಯಗಳಿಸಿದರು.
Next Story