varthabharthi


ನಿಮ್ಮ ಅಂಕಣ

ಶಿಲಾನ್ಯಾಸದ ಅಡಿಗಲ್ಲಿನಲ್ಲಿ ಕನ್ನಡವೇ ಇಲ್ಲ!

ವಾರ್ತಾ ಭಾರತಿ : 18 Jan, 2021
-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ಮಾನ್ಯರೇ,

ಶಿವಮೊಗ್ಗದ ಭದ್ರಾವತಿಯಲ್ಲಿ ಮೊನ್ನೆ ನಡೆದ ಆರ್ ಎಎಫ್ ಘಟಕದ ಶಿಲಾನ್ಯಾಸದ ಕಾರ್ಯಕ್ರಮದಲ್ಲಿ ಬಳಸ ಲಾದ ಅಡಿಗಲ್ಲಿನಲ್ಲಿ ಆಂಗ್ಲಭಾಷೆಯ ಜೊತೆಗೆ ಹಿಂದಿಯನ್ನು ಬಳಸಿರುವುದು ಕನ್ನಡ ವಿರೋಧಿಯಾಗಿದೆ. ಐಎಎಫ್ ಕೇಂದ್ರ ಸರಕಾರದ ಇಲಾಖೆಯಾದರೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ವಿವರಗಳನ್ನ್ನು ಪ್ರದರ್ಶಿಸುವ ಅಡಿಗಲ್ಲಿನಲ್ಲಿ ಆಂಗ್ಲಭಾಷೆಯ ಜೊತೆಗೆ ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸುವುದು ಶಿಷ್ಟಾಚಾರ ಜೊತೆಗೆ ನಿಯಮವೂ ಹೌದು.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಸರಕಾರದ ಮಂತ್ರಿಗಳು ಕಾರ್ಯಕ್ರಮದಲ್ಲಿದ್ದರೂ ಅಲ್ಲಿ ಕನ್ನಡಕ್ಕೆ ಅಪಚಾರವಾಗಿದೆ. ರಾಜ್ಯ ಬಿಜೆಪಿ ಸರಕಾರ ತಮ್ಮ ಕೇಂದ್ರ ನಾಯಕರನ್ನು ಮೆಚ್ಚಿಸಲು ಅನಗತ್ಯವಾಗಿ ಹಿಂದಿ ಹೇರಿಕೆ ಮಾಡಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ತಮ್ಮ ನಾಯಕರನ್ನು ಮೆಚ್ಚಿಸಲು ರಾಜ್ಯ ಸರಕಾರವು ಕನ್ನಡ ವಿರೋಧಿಯಾಗಿರುವುದು ನಿಯಮಗಳ ವಿರುದ್ಧವಾಗಿದೆ. ಸರಕಾರ ಈಗಲಾದರೂ ಎಚ್ಚೆತ್ತು ಶಿಲಾನ್ಯಾಸದ ವಿವರಗಳು ಇರುವ ಮಾಹಿತಿಯನ್ನು ಕನ್ನಡದಲ್ಲಿ ಪ್ರದರ್ಶಿಸಲಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)