ಗಲ್ಫ್ ಸುದ್ದಿ
ಕೊರೋನ: ಒಂದು ವಾರ ಒಮಾನ್ ಗಡಿ ಬಂದ್
ವಾರ್ತಾ ಭಾರತಿ : 18 Jan, 2021
ಮಸ್ಕತ್ (ಒಮಾನ್), ಜ. 18: ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸೋಮವಾರದಿಂದ ಒಂದು ವಾರದ ಅವಧಿಗೆ ಒಮಾನ್ ತನ್ನ ಭೂ ಗಡಿಗಳನ್ನು ಮುಚ್ಚಲಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಒಎನ್ಎ ರವಿವಾರ ತಿಳಿಸಿದೆ.
ಈ ಕ್ರಮವು ಸೋಮವಾರ ಸಂಜೆ 6 ಗಂಟೆಯಿಂದ ಜಾರಿಗೆ ಬಂದಿದ್ದು, ಅಗತ್ಯ ಬಿದ್ದರೆ ಗಡಿ ಮುಚ್ಚುಗಡೆಯನ್ನು ನಿಗದಿತ ಅವಧಿಗೂ ಮೀರಿ ವಿಸ್ತರಿಸಬಹುದಾಗಿದೆ ಎಂದು ದೇಶದ ಕೊರೋನ ವೈರಸ್ ತುರ್ತು ಸಮಿತಿಯ ನಿರ್ಧಾರವೊಂದನ್ನು ಉಲ್ಲೇಖಿಸಿ ಒಎನ್ಎ ವರದಿ ಮಾಡಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)