varthabharthi


ಅಂತಾರಾಷ್ಟ್ರೀಯ

ಉಚಿತ ಕೊರೋನ ಲಸಿಕೆ ಪೂರೈಕೆಗೆ ಭಾರತದಿಂದ ಭರವಸೆ: ಭೂತಾನ್ ಪ್ರಧಾನಿ

ವಾರ್ತಾ ಭಾರತಿ : 19 Jan, 2021

ಥಿಂಪು (ಭೂತಾನ್), ಜ. 19: ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂಬುದಾಗಿ ಭಾರತ ಸರಕಾರ ಘೋಷಿಸಿದೆ ಎಂದು ಭೂತಾನ್ ಪ್ರಧಾನಿ ಲೊಟಾಯ್ ಶೆರಿಂಗ್ ಸೋಮವಾರ ಹೇಳಿದ್ದಾರೆ.

‘‘ಉಚಿತವಾಗಿ ಲಸಿಕೆಗಳನ್ನು ಒದಗಿಸಲಾಗುವುದು ಎಂದು ಭಾರತ ಸರಕಾರ ಘೋಷಿಸಿದೆ. ಒಂದು ವೇಳೆ, ಲಸಿಕೆಗಳಿಗೆ ಹಣ ನೀಡಬೇಕಾದರೆ, ನನ್ನದೇ ಖಾಸಗಿ ಸಂಪನ್ಮೂಲದಿಂದ ಕೊಡಲಾಗುವುದು ಎಂದು ದೊರೆ ಹೇಳಿದ್ದಾರೆ’’ ಎಂದು ಪ್ರಧಾನಿ ಹೇಳಿರುವುದಾಗಿ ‘ದ ಭೂತಾನೀಸ್’ ಪತ್ರಿಕೆ ವರದಿ ಮಾಡಿದೆ.

ಭಾರತವು ಭೂತಾನ್‌ಗೆ ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಲಸಿಕೆಯನ್ನು ನೀಡುವ ಸಾಧ್ಯತೆಯಿದೆ ಎಂದು ಪ್ರಧಾನಿ ಶೆರಿಂಗ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)