varthabharthi


ಅಂತಾರಾಷ್ಟ್ರೀಯ

ದೀರ್ಘ ಸಮಯದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾದ ಉದ್ಯಮಿ ಜಾಕ್ ಮಾ

ವಾರ್ತಾ ಭಾರತಿ : 20 Jan, 2021

ಬೀಜಿಂಗ್: ಅಲಿಬಾಬಾ ಗ್ರೂಪ್ ಸ್ಥಾಪಕ  ಜಾಕ್ ಮಾ ದೀರ್ಘ ಸಮಯದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ ಬಳಿಕ  ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಜಾಕ್ ಮಾ ಭವಿಷ್ಯದ ಕುರಿತಂತೆ ಊಹಾಪೋಹ ಹರಡಿತ್ತು.

ಜಾಕ್ ಮಾ ಬುಧವಾರ ಆನ್ ಲೈನ್ ಸಮ್ಮೇಳನವೊಂದರಲ್ಲಿ 100 ಗ್ರಾಮೀಣ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು ಎಂದು ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ. ಉದ್ಯಮಿಯಾಗುವ ಮೊದಲು ಇಂಗ್ಲೀಷ್ ಶಿಕ್ಷಕರಾಗಿದ್ದ ಜಾಕ್ ಮಾ, ಗ್ರಾಮೀಣ ಶಿಕ್ಷಣ ತಜ್ಞರ ಸಾಧನೆಗಳನ್ನು ಗುರುತಿಸಲು ವರ್ಷಂಪ್ರತಿ ಆಯೋಜಿಸುವ ಕಾರ್ಯಕ್ರಮ ಇದಾಗಿದೆ. ಈಬಾರಿ ಕೋವಿಡ್-19 ಕಾರಣ ಆನ್ ಲೈನ್ ನಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಶಿಕ್ಷಕರಿಗೆ ಶುಭ ಹಾರೈಸಿದರು.

ತಿಂಗಳುಗಳ ಬಳಿಕ ಜಾಕ್ ಮಾ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿರುವ ವರದಿಯು ಸ್ಥಳೀಯ ಬ್ಲಾಗ್ ನಲ್ಲಿ ಮೊದಲು ವರದಿಯಾಗಿತ್ತು. ಈ ವಿಷಯದ ಅರಿವಿರುವ ಜನರು ಇದನ್ನು ದೃಢಪಡಿಸಿದರು. 

ಜಾಕ್ ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೀಜಿಂಗ್ ಆನ್‍ಲೈನ್ ಫೈನಾನ್ಸ್ ಆಂಟ್ ಗ್ರೂಪ್ ಕಂಪೆನಿ ಹಾಗೂ ಅಲಿ ಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್  ಭವಿಷ್ಯದ ಕುರಿತು ನಿರಂತರವಾಗಿ ಹರಡಿದ್ದ ವದಂತಿಗೆ ಕಡಿವಾಣ ಬಿದ್ದಂತಾಗಿದೆ. 

ಅಕ್ಟೋಬರ್ ನಲ್ಲಿ ಶಾಂಘೈನಲ್ಲಿ ವೇದಿಕೆಯೊಂದರಲ್ಲಿ ಮಾತನಾಡಿದ್ದ ಜಾಕ್ ಮಾ ಆಡಳಿತ ಪಕ್ಷದ ನಿಯಂತ್ರಕ ದೋಷವನ್ನು ಬೆಟ್ಟುಮಾಡಿದ್ದರು.  ಈ ಮೂಲಕ ಅಧಿಕಾರಿಗಳೊಂದಿಗೆ ಘರ್ಷಣೆಗೆ ಇಳಿದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)