varthabharthi


ಅಂತಾರಾಷ್ಟ್ರೀಯ

ಅಧಿಕಾರದ ಕೊನೆಯ ದಿನದಂದು ಶ್ವೇತಭವನದಲ್ಲಿ ಟ್ರಂಪ್ ಪುತ್ರಿಯ ನಿಶ್ಚಿತಾರ್ಥ

ವಾರ್ತಾ ಭಾರತಿ : 20 Jan, 2021

photo:twitter

 ವಾಶಿಂಗ್ಟನ್, ಜ. 20: ಅಮೆರಿಕದ ಅಧ್ಯಕ್ಷರಾಗಿ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಕಳೆದ ಕೊನೆಯ ದಿನ ಕಳೆದ್ದಿದ್ದು, ಮಂಗಳವಾರ ಅವರ ಕಿರಿಯ ಪುತ್ರಿ ಟಿಫಾನಿ ಟ್ರಂಪ್‌ರ ಮದುವೆ ನಿಶ್ಚಿತಾರ್ಥವು ಶ್ವೇತಭವನದಲ್ಲಿ ನಡೆದಿದೆ.

‘‘ಶ್ವೇತಭವನದಲ್ಲಿ ನಾನು ನನ್ನ ಕುಟುಂಬ ಸದಸ್ಯರೊಂದಿಗೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಹಲವಾರು ಮೈಲಿಗಲ್ಲು ಮತ್ತು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ. ಆದರೆ, ಅವೆಲ್ಲವುಗಳಿಗಿಂತಲೂ ಹೆಚ್ಚು ವಿಶೇಷವಾದುದು ನನ್ನ ಗೆಳೆಯ ಮೈಕಲ್ ಬೌಲೋಸ್ ಜೊತೆ ಇಂದು ನಡೆದ ನನ್ನ ವಿವಾಹ ನಿಶ್ಚಿತಾರ್ಥ’’ ಎಂದು ಟಿಫಾನಿ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

27 ವರ್ಷದ ಟಿಫಾನಿ, ಟ್ರಂಪ್ ಮತ್ತು ಅವರ ಎರಡನೇ ಪತ್ನಿ ಮಾರ್ಲಾ ಮೇಪಲ್ಸ್‌ರ ಏಕೈಕ ಪುತ್ರಿ ಆಗಿದ್ದಾರೆ. 23 ವರ್ಷದ ಬೌಲೋಸ್ ನೈಜೀರಿಯದ ಬೃಹತ್ ಉದ್ಯಮ ಸಾಮ್ರಾಜ್ಯವೊಂದರ ಉತ್ತರಾಧಿಕಾರಿಯಾಗಿದ್ದಾರೆ. ಬೌಲೋಸ್ ಲಂಡನ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಇಬ್ಬರು ಅಲ್ಲಿ ಮೊದಲು ಭೇಟಿಯಾಗಿದ್ದರು ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)