varthabharthi


ಅಂತಾರಾಷ್ಟ್ರೀಯ

ಖಶೋಗಿ ಹತ್ಯೆ ವರದಿ ಬಿಡುಗಡೆ ಮಾಡುತ್ತೇನೆಂದು ಭರವಸೆ ನೀಡಿದ ಆಗಮನ ನ್ಯಾಶನಲ್ ಇಂಟೆಲಿಜೆನ್ಸ್ ನಿರ್ದೇಶನ

ವಾರ್ತಾ ಭಾರತಿ : 20 Jan, 2021

ವಾಶಿಂಗ್ಟನ್, ಜ. 20: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಕುರಿತ ರಹಸ್ಯವಲ್ಲದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿ ಗುಪ್ತಚರ ಇಲಾಖೆ ನ್ಯಾಶನಲ್ ಇಂಟಲಿಜನ್ಸ್‌ನ ನಿರ್ದೇಶಕಿ ಹುದ್ದೆಗೆ ಜೋ ಬೈಡನ್‌ರ ಅಭ್ಯರ್ಥಿಯಾಗಿರುವ ಆ್ಯವ್ರಿಲ್ ಹೇನ್ಸ್ ಮಂಗಳವಾರ ಹೇಳಿದ್ದಾರೆ.

ಸೆನೆಟ್‌ನಲ್ಲಿ ನಡೆದ ವಿಚಾರಣೆಯ ವೇಳೆ, ನಿರ್ಗಮನ ಸರಕಾರದ ಅರಾಜಕತೆ ಮತ್ತು ಅದರ ಅತಿಯಾಗಿ ರಹಸ್ಯ ಕಾಯ್ದುಕೊಳ್ಳುವ ನೀತಿಯನ್ನು ತಕ್ಷಣ ಬದಲಾಯಿಸುವ ಅವಕಾಶ ನಿಮಗಿದೆಯೇ ಎಂಬುದಾಗಿ ಸೆನೆಟರ್ ರಾನ್ ವೈಡನ್ ಅವರು ಹೇನ್ಸ್‌ರನ್ನು ಪ್ರಶ್ನಿಸಿದರು.

‘‘ಹೌದು ಸೆನೆಟರ್, ಖಂಡಿತವಾಗಿಯೂ, ನಾನು ಕಾನೂನನ್ನು ಅನುಸರಿಸುತ್ತೇನೆ’’ ಎಂದು ಹೇನ್ಸ್ ಉತ್ತರಿಸಿದರು.

2018 ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಿಂದ ತನ್ನ ಮದುವೆಗಾಗಿ ದಾಖಲೆ ಪತ್ರಗಳನ್ನು ತರಲು ಹೋಗಿದ್ದ ವೇಳೆ, ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಗುಪ್ತಚರ ಏಜಂಟ್‌ಗಳು ಖಶೋಗಿಯನ್ನು ಬರ್ಬರವಾಗಿ ಹತ್ಯೆಗೈದಿದ್ದರು.

 ಹತ್ಯೆಗೆ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರು ಎಂಬ ತೀರ್ಮಾನಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಬಂದಿದೆ ಎಂಬುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಲ್ಮಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಅದೂ ಅಲ್ಲದೆ, ಹತ್ಯೆ ಕುರಿತ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡದಿರುವ ಕಾನೂನುಬಾಹಿರ ನಿರ್ಧಾರವನ್ನೂ ಟ್ರಂಪ್ ಸರಕಾರ ತೆಗೆದುಕೊಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)