varthabharthi


ಅಂತಾರಾಷ್ಟ್ರೀಯ

ಉಯಿಘರ್ ಜನಾಂಗೀಯ ಹತ್ಯೆ ‘ಆಕ್ರೋಶಕಾರಿ ಸುಳ್ಳು’: ಚೀನಾ

ವಾರ್ತಾ ಭಾರತಿ : 20 Jan, 2021

ಬೀಜಿಂಗ್ (ಚೀನಾ), ಜ. 20: ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಉಯಿಘರ್ ಜನಾಂಗೀಯ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ನಡೆಯುತ್ತಿದೆ ಎಂಬ ಅಮೆರಿಕದ ಆರೋಪವನ್ನು ಚೀನಾ ಬುಧವಾರ ನಿರಾಕರಿಸಿದೆ.

ಅಮೆರಿಕದ ಆರೋಪಗಳು ‘ಆಕ್ರೋಶಕಾರಿ ಸುಳ್ಳುಗಳು’ ಮತ್ತು ‘ವಿಷ’ವಾಗಿವೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದರು.

ಅಮೆರಿಕದ ನಿರ್ಗಮನ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ತನ್ನ ಅಧಿಕಾರಾವಧಿಯ ಉದ್ದಕ್ಕೂ ‘ರೋಮಾಂಚಕಾರಿ ಸುಳ್ಳುಗಳ ಉತ್ಪಾದನೆ’ಯಲ್ಲಿ ತೊಡಗಿದ್ದರು ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)