varthabharthi


ಅಂತಾರಾಷ್ಟ್ರೀಯ

ಎತ್ತರ ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 61 ಲಕ್ಷ ರೂ. ಖರ್ಚು ಮಾಡಿದ ವಿದ್ಯಾರ್ಥಿ!

ವಾರ್ತಾ ಭಾರತಿ : 20 Jan, 2021

 ಡಲ್ಲಾಸ್ (ಅಮೆರಿಕ), ಜ. 20: ಅಮೆರಿಕದ ವ್ಯಕ್ತಿಯೊಬ್ಬರು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತನ್ನ ಎತ್ತರವನ್ನು 5 ಅಡಿ 11 ಇಂಚಿನಿಂದ 6 ಅಡಿ 1 ಇಂಚಿಗೆ ಹೆಚ್ಚಿಸಿಕೊಂಡಿದ್ದಾರೆ.

 ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದ ನಿವಾಸಿ, 28 ವರ್ಷದ ವೈದ್ಯಕೀಯ ವಿದ್ಯಾರ್ಥಿ ಆಲ್ಫೋನ್ಸೊ ಫ್ಲೋರ್ಸ್‌ ಕಾಲು ಉದ್ದ ಮಾಡುವ ಸ್ತ್ರಚಿಕಿತ್ಸೆಗೆ ಒಳಗಾದರು.

ಹಾರ್ವರ್ಡ್‌ನಲ್ಲಿ ತರಬೇತಿ ಪಡೆದಿರುವ ಮೂಳೆ ಸರ್ಜನ್ ಡಾ. ಕೆವಿನ್ ಡೇಬಿಪರ್ಶದ್ ಈ ಶಸ್ತ್ರಚಿಕಿತ್ಸೆ ನಡೆಸಿದರು. ಇದಕ್ಕೆ ಈಗಾಗಲೇ 55 ಲಕ್ಷ ರೂ. ಖರ್ಚಾಗಿದ್ದು, ಅದು 61 ಲಕ್ಷ ರೂಪಾಯಿವರೆಗೆ ಏರಬಹುದು ಎಂದು ಡಾ. ಕೆವಿನ್ ಡೇಬಿಪರ್ಶದ್‌ರ ವೆಬ್‌ಸೈಟ್ ತಿಳಿಸಿದೆ.

ಈ ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯೊಬ್ಬರ ಎತ್ತರವನ್ನು ಆರು ಇಂಚುಗಳಷ್ಟು ಹೆಚ್ಚಿಸಬಹುದು ಎಂದು ಅದು ಹೇಳುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)