varthabharthi


ನಿಧನ

ಯಕ್ಷಗಾನ ಕಲಾವಿದ ಸತೀಶ ಹೆಗಡೆ ನಿಧನ

ವಾರ್ತಾ ಭಾರತಿ : 21 Jan, 2021

ಉಡುಪಿ, ಜ.21: ಬಡಗುತಿಟ್ಟು ಕಲಾವಿದ ಸತೀಶ ಹೆಗಡೆ ಅಣೆಗದ್ದೆ (56) ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚದವರಾದ ಸತೀಶ ಹೆಗಡೆ ನಾಗರಕೋಡಿಗೆ, ಕಮಲಶಿಲೆ, ಸಿಗಂಧೂರು, ಹಾಲಾಡಿ, ಗುತ್ಯಮ್ಮ, ಸೀತೂರು ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಗೈದಿದ್ದಾರೆ. ಕಳೆದ ತಿರುಗಾಟವನ್ನು ಕಾರಣಗಿರಿ ಮೇಳದಲ್ಲಿ ಮಾಡಿದ್ದರು. ಕೌರವ, ರಾವಣ ಮಹಿಷಾಸುರ ಮೊದಲಾದ ಖಳಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತಿದ್ದರು.

ಸತೀಶ್ ಹೆಗಡೆ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)