varthabharthi


ಅಂತಾರಾಷ್ಟ್ರೀಯ

ಟ್ರಂಪ್ ಸರಕಾರದ ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ರದ್ದುಗೊಳಿಸಿದ ಜೋ ಬೈಡನ್

ವಾರ್ತಾ ಭಾರತಿ : 21 Jan, 2021

ವಾಷಿಂಗ್ಟನ್, ಜ. 21: ಅಮೆರಿಕದ 46ನೇ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಜೋ ಬೈಡನ್ ಅವರು ಟ್ರಂಪ್ ಸರಕಾರ ಜಾರಿಗೆ ತಂದ ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ಯನ್ನು ರದ್ದುಗೊಳಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಜೋ ಬೈಡನ್ ಅವರು ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ತೆರವು ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ. ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ಯಿಂದಾಗಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ಹಾಗೂ ಆಫ್ರಿಕಾ ದೇಶಗಳ ಪ್ರಯಾಣಿಕರು ಅಮೆರಿಕ ಪ್ರಯಾಣದ ನಿರ್ಬಂಧಕ್ಕೆ ಒಳಗಾಗಿದ್ದರು.

ಇದೀಗ ಈ ನೀತಿಯಿಂದ ತೊಂದರೆಗೆ ಒಳಗಾದವರಿಗೆ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಜೋ ಬೈಡನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

2017ರಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ 7 ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮನ್‌ನಿಂದ ಅಮೆರಿಕಕ್ಕೆ ಪ್ರಯಾಣಿಸುವುದಕ್ಕೆ ನಿರ್ಬಂಧ ವಿಧಿಸಿ ನೀತಿ ಜಾರಿಗೆ ತಂದಿದ್ದರು. ಈ ನಿಷೇಧ ನೀತಿ ಹಲವು ಸವಾಲುಗಳನ್ನು ಎದುರಿಸಿತ್ತು. ಆದರೆ, ಈ ನೀತಿಯ ಅಂತಿಮ ಆವೃತ್ತಿಯನ್ನು 2018ರಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)