varthabharthi


ರಾಷ್ಟ್ರೀಯ

ಮಮತಾ ಬ್ಯಾನರ್ಜಿ ಸಂಪುಟ ತ್ಯಜಿಸಿದ ರಜಿಬ್ ಬ್ಯಾನರ್ಜಿ

ಪ.ಬಂಗಾಳದ ಇನ್ನೋರ್ವ ಸಚಿವ ರಾಜೀನಾಮೆ

ವಾರ್ತಾ ಭಾರತಿ : 22 Jan, 2021

ಕೋಲ್ಕತಾ: ಪಶ್ಚಿಮಬಂಗಾಳದ ಸಚಿವ ರಜಿಬ್ ಬ್ಯಾನರ್ಜಿ ಶುಕ್ರವಾರ ಮಮತಾ ಬ್ಯಾನರ್ಜಿ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ.ಬಂಗಾಳ ಸರಕಾರದಲ್ಲಿ ರಜಿಬ್ ಬ್ಯಾನರ್ಜಿ ಅರಣ್ಯ ಸಚಿವರಾಗಿದ್ದರು.

ಪಶ್ಚಿಮಬಂಗಾಳದ ಜನರಿಗೆ ಸೇವೆ ಸಲ್ಲಿಸಲು ಇದೊಂದು ದೊಡ್ಡ ಗೌರವ ಹಾಗೂ ಸೌಲಭ್ಯವಾಗಿತ್ತು. ಈ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ರಜಿಬ್ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಕಳೆದ ಕೆಲವು ವಾರಗಳಿಂದ ಆಡಳಿತಾರೂಢ ಪಕ್ಷದ ಕೆಲವು ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದ ಡೊಮ್ ಜುರ್ ಶಾಸಕ ಬ್ಯಾನರ್ಜಿ ಅಸೆಂಬ್ಲಿ ಚುನಾವಣೆಗೆ ಕೆಲವೇ ಸಮಯವಿರುವಾಗ ಟಿಎಂಸಿಯನ್ನು ಯಾಕೆ ತ್ಯಜಿಸಿದ್ದಾರೆಂದು ಸ್ಪಷ್ಟ ಕಾರಣ ನೀಡಿಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)