varthabharthi


ಅಂತಾರಾಷ್ಟ್ರೀಯ

ಪ್ರತೀಕಾರ ಅನಿವಾರ್ಯ: ಟ್ರಂಪ್‌ಗೆ ಇರಾನ್‌ನ ಸರ್ವೋಚ್ಛ ನಾಯಕ ಎಚ್ಚರಿಕೆ

ವಾರ್ತಾ ಭಾರತಿ : 22 Jan, 2021

ಟೆಹರಾನ್ (ಇರಾನ್), ಜ. 22: ಅವೆುರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ನಡೆದ ಇರಾನ್ ಸೇನಾಪತಿ ಹತ್ಯೆಗೆ ಪ್ರತೀಕಾರ ತೀರಿಸಲಾಗುವುದು ಎಂದು ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಕಚೇರಿ ಟ್ವೀಟೊಂದರಲ್ಲಿ ಹೇಳಿದೆ. ಟ್ವೀಟ್‌ನಲ್ಲಿ ಈ ಬರಹದ ಜೊತೆಗೆ, ಯುದ್ಧವಿಮಾನವೊಂದರ ಅಡಿಯಲ್ಲಿ ಗಾಲ್ಫ್ ಆಡುತ್ತಿರುವ ಟ್ರಂಪ್‌ರ ಚಿತ್ರವೊಂದನ್ನೂ ಹಾಕಲಾಗಿದೆ.

2020ರ ಜನವರಿ 3ರಂದು ಇರಾಕ್ ರಾಜಧಾನಿ ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಡ್ರೋನ್ ದಾಳಿಯಲ್ಲಿ ಇರಾನ್‌ನ ಉನ್ನತ ಸೇನಾಧಿಕಾರಿ ಜನರಲ್ ಖಾಸಿಮ್ ಸುಲೈಮಾನಿ ಮೃತಪಟ್ಟಿದ್ದರು.

ಈ ದಾಳಿಗೆ ಪ್ರತೀಕಾರ ತೀರಿಸದೆ ಬೇರೆ ದಾರಿಯಿಲ್ಲ ಎಂದು ಟ್ವೀಟ್ ಎಚ್ಚರಿಸಿದೆ.

‘‘ಪ್ರತೀಕಾರ ಅನಿವಾರ್ಯ. ಸುಲೈಮಾನಿಯ ಹಂತಕ ಮತ್ತು ಅದಕ್ಕೆ ಆದೇಶ ನೀಡಿದ ವ್ಯಕ್ತಿ ಪ್ರತೀಕಾರವನ್ನು ಎದುರಿಸಲೇ ಬೇಕು. ಪ್ರತೀಕಾರ ಯಾವುದೇ ಕ್ಷಣದಲ್ಲಿ ಸಂಭವಿಸಬಹುದು’’ ಎಂದು ಅದು ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)