varthabharthi


ಅಂತಾರಾಷ್ಟ್ರೀಯ

ಹಾಂಕಾಂಗ್ ದಮನ: ಚೀನಾವನ್ನು ಖಂಡಿಸಿದ ಯುರೋಪ್ ಸಂಸದರು

ವಾರ್ತಾ ಭಾರತಿ : 23 Jan, 2021

 ಬೀಜಿಂಗ್ (ಚೀನಾ), ಜ. 22: ಹಾಂಕಾಂಗ್‌ನ ಪ್ರಜಾಪ್ರಭುತ್ವಪರ ಹೋರಾಟಗಾರರ ವಿರುದ್ಧ ಚೀನಾ ನಡೆಸುತ್ತಿರುವ ದಮನ ಕಾರ್ಯಾಚರಣೆಯನ್ನು ಖಂಡಿಸಿ ಐರೋಪ್ಯ ಒಕ್ಕೂಟ ತೆಗೆದುಕೊಂಡಿರುವ ನಿರ್ಣಯದ ವಿರುದ್ಧ ಚೀನಾ ಶುಕ್ರವಾರ ಹರಿಹಾಯ್ದಿದೆ. ಹಾಂಕಾಂಗ್ ಸರಕಾರದ ಆಂತರಿಕ ವ್ಯವಹಾರದಲ್ಲಿ ಯುರೋಪಿಯನ್ ಸಂಸದರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅದು ಆರೋಪಿಸಿದೆ.

ಪ್ರಜಾಪ್ರಭುತ್ವಪರ ಹೋರಾಟಗಾರರ ಇತ್ತೀಚಿನ ಬಂಧನಕ್ಕೆ ಹೊಣೆಯಾಗಿರುವ ಚೀನಾ ಮತ್ತು ಹಾಂಕಾಂಗ್ ಅಧಿಕಾರಿಗಳನ್ನು ಗುರಿಯಾಗಿಸಿ ದಿಗ್ಬಂಧನಗಳನ್ನು ಹೇರಬೇಕು ಎಂಬುದಾಗಿ ಕರೆ ನೀಡುವ ನಿರ್ಣಯವನ್ನು ಐರೋಪ್ಯ ಸಂಸತ್ತು ಗುರುವಾರ ಅಂಗೀಕರಿಸಿದೆ.

ಆದರೆ, ಶುಕ್ರವಾರ ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ‘‘ಹಾಂಕಾಂಗ್ ಚೀನಾಕ್ಕೆ ಮರಳಿದೆ ಎನ್ನುವ ವಾಸ್ತವ’’ವನ್ನು ಒಪ್ಪಿಕೊಳ್ಳುವಂತೆ ಐರೋಪ್ಯ ಸಂಸದರನ್ನು ಒತ್ತಾಯಿಸಿದೆ.

 ಐರೋಪ್ಯ ಸಂಸತ್‌ನ ಸದಸ್ಯರು ಹಾಂಕಾಂಗ್‌ನಲ್ಲಿ ಯಾವುದೇ ವಿಧದಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಒತ್ತಾಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)