varthabharthi


ಅಂತಾರಾಷ್ಟ್ರೀಯ

ಟ್ರಂಪ್‌ಗೆ ಕರೆ ಮಾಡುವ ಉದ್ದೇಶ ಬೈಡನ್ ಹೊಂದಿಲ್ಲ: ಶ್ವೇತಭವನ

ವಾರ್ತಾ ಭಾರತಿ : 23 Jan, 2021

ವಾಶಿಂಗ್ಟನ್, ಜ. 22: ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೂತನ ಅಧ್ಯಕ್ಷ ಜೋ ಬೈಡನ್ ಫೋನ್ ಕರೆ ಮಾಡುವ ಪ್ರಸ್ತಾವವಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಗುರುವಾರ ಹೇಳಿದ್ದಾರೆ.

ಟ್ರಂಪ್ ನನಗೊಂದು ‘ಅತ್ಯಂತ ಉದಾತ್ತ’ ಪತ್ರವೊಂದನ್ನು ಓವಲ್ ಕಚೇರಿಯಲ್ಲಿ ಬಿಟ್ಟು ಹೋಗಿದ್ದಾರೆ ಹಾಗೂ ನಾನು ಅವರೊಂದಿಗೆ ಮಾತನಾಡಲು ಬಯಸಿದ್ದೇನೆ ಎಂದು ಬುಧವಾರ ತನ್ನ ಪ್ರಮಾಣವಚನ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಬೈಡನ್ ಹೇಳಿದ್ದರು.

ಬೈಡನ್‌ರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿರಲಿಲ್ಲ. ಆಧುನಿಕ ಅಮೆರಿಕದ ಇತಿಹಾಸದಲ್ಲೇ, ತನ್ನ ಉತ್ತರಾಧಿಕಾರಿಯ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸದ ಮೊದಲ ನಿರ್ಗಮನ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.

ಈ ಸಂಬಂಧ, ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಸಾಕಿ ಉತ್ತರಿಸುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)