varthabharthi


ರಾಷ್ಟ್ರೀಯ

ಪ್ರಧಾನಿ ಮೋದಿ ಭೇಟಿಗೆ ಮೊದಲು ಕೋಲ್ಕತಾದಲ್ಲಿ ಬೃಹತ್ ರ‍್ಯಾಲಿ ನಡೆಸಿದ ಮಮತಾ ಬ್ಯಾನರ್ಜಿ

ವಾರ್ತಾ ಭಾರತಿ : 23 Jan, 2021

ಕೋಲ್ಕತಾ:ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ನೆನಪಿಗಾಗಿ ನಡೆಯುವ ಕಾರ್ಯಕ್ರಮದಲ್ಲಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಮೊದಲೇ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೋಸ್ ಜನ್ಮದಿನಾಚರಣೆ ನಿಮಿತ್ತ ನಗರದ ಶ್ಯಾಮ್ ಬಝಾರ್ ನಿಂದ ರೆಡ್ ರೋಡ್ ತನಕ ಬೃಹತ್ ಪಾದಯಾತ್ರೆ ನಡೆಸಿದರು.

ಮಮತಾ ಬ್ಯಾನರ್ಜಿ ಅವರ ಬೃಹತ್ ರ‍್ಯಾಲಿಯಲ್ಲಿ ನೂರಾರು ಜನರು ಸಿಎಂ ಹಿಂದೆ ಮೆರವಣಿಗೆಯಲ್ಲಿ  ಸಾಗುತ್ತಿರುವುದು ವೀಡಿಯೊದಲ್ಲಿದೆ.

ಪ್ರಧಾನಿ ಮೋದಿ ಅವರು ಶನಿವಾರ ಅಸ್ಸಾಂಗೆ ಭೇಟಿ ನೀಡಲಿದ್ದು, ಬಳಿಕ ಕೋಲ್ಕತಾಕ್ಕೆ ಭೇಟಿ ನೀಡಲಿದ್ದಾರೆ. ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಪರಾಕ್ರಮ ದಿವಸ್ ದಿನಾಚರಣೆಯ ವೇಳೆ ಪ್ರಧಾನಿ ಭಾಷಣ ಮಾಡಲಿದ್ದಾರೆ.

ಶ್ಯಾಮ್ ಬಝಾರ್ ನಿಂದ ರೆಡ್ ರೋಡ್ ತನಕ ಬೃಹತ್ ರ್ಯಾಲಿಗೆ ಮೊದಲು ಸಿಎಂ ಮಮತಾ ಅವರು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಿದರು. ಜನವರಿ 23ರಂದು ದೇಶಕ್ಕೆ ರಜೆ ಘೋಷಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)