varthabharthi


ರಾಷ್ಟ್ರೀಯ

ಬಿಜೆಪಿ ನಾಯಕರು ಎಷ್ಟು ಬಾರಿ ರಾಜ್ಯಕ್ಕೆ ಬಂದರೂ, ತಮಿಳುನಾಡಿನಲ್ಲಿ ತಾವರೆ ಅರಳುವುದಿಲ್ಲ: ಕನಿಮೋಳಿ

ವಾರ್ತಾ ಭಾರತಿ : 23 Jan, 2021

ರಾಮನಾಥಪುರಂ,ಜ.23: ರಾಜ್ಯಕ್ಕೆ ಬಿಜೆಪಿ ನಾಯಕರುಗಳ ಭೇಟಿ ಯಾವುದೇ ವ್ಯತ್ಯಾಸವುಂಟು ಮಾಡದು, "ತಮಿಳುನಾಡಿನಲ್ಲಿ ತಾವರೆ ಅರಳುವುದಿಲ್ಲ" ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದಾರೆ.

ರಾಮನಾಥಪುರಂನಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ರಾಜ್ಯದಲ್ಲಿ 23 ಲಕ್ಷ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ನೆರೆ ಹಾವಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ, ಮಹಿಳೆಯರಿಗೆ ಸುರಕ್ಷತೆಯಿಲ್ಲ. ಎಐಎಡಿಎಂಕೆ ಸರಕಾರ ಕೋವಿಡ್ ಸಾಂಕ್ರಾಮಿಕದ ಸಂದರ್ಭ ಬಹಳಷ್ಟು ಭ್ರಷ್ಟಾಚಾರ ನಡೆಸಿದೆ" ಎಂದು ಆರೋಪಿಸಿದರು.

"ಬಿಜೆಪಿ ನಾಯಕರು ಎಷ್ಟೇ ಸಲ ಬೇಕಾದರೂ ರಾಜ್ಯಕ್ಕೆ ಬರಲಿ, ಇಲ್ಲಿ ತಾವರೆ ಅರಳುವುದಿಲ್ಲ" ಎಂದು ಅವರು ಹೇಳಿದರು.

"ತಮಿಳುನಾಡಿನ ನಾಲ್ಕು ಮೀನುಗಾರರ ಮೇಲೆ ದಾಳಿ ನಡೆಸಿ ಶ್ರೀಲಂಕಾದ ನೌಕಾಪಡೆ ಅವರ ಹತ್ಯೆಗೈದಿದೆ. ಬೋಟುಗಳ ಮೇಲೆ ದಾಳಿ ನಡೆಸಿ ಹಾನಿ ನಡೆಸುವುದನ್ನು ಅದು ಮುಂದುವರಿಸಿದೆ. ಪ್ರಧಾನಿ ಇದಕ್ಕೊಂದು ಖಾಯಂ ಪರಿಹಾರ ಕಂಡುಕೊಳ್ಳಬೇಕಿದೆ. ಈ ಕುರಿತಂತೆ ಎರಡೂ ದೇಶಗಳ ನಡುವೆ ಚರ್ಚೆ ನಡೆಯಬೇಕಿದೆ" ಎಂದು ಕನಿಮೋಳಿ ಹೇಳಿದರು.

ಜನರು ಸರಕಾರ ಬದಲಾಗಬೇಕು, ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)