varthabharthi


ಅಂತಾರಾಷ್ಟ್ರೀಯ

ಭಯೋತ್ಪಾದನೆಗೆ ಹಣ ಪೂರೈಕೆ: ಹಫೀಝ್ ಸಯೀದ್ ಬಂಟರಿಗೆ ಜೈಲು ಶಿಕ್ಷೆ

ವಾರ್ತಾ ಭಾರತಿ : 23 Jan, 2021

ಲಾಹೋರ್ (ಪಾಕಿಸ್ತಾನ), ಜ. 23: ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡಿದ ಪ್ರಕರಣದಲ್ಲಿ, ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್‌ನ ಜಮಾಅತುದಅವಾ ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರಿಗೆ ಲಾಹೋರ್‌ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಶುಕ್ರವಾರ ಆರು ತಿಂಗಳ ಜೈಲು ವಿಧಿಸಿದೆ.

ಸಯೀದ್‌ನ ಭಾವ ಹಫೀಝ್ ಅಬ್ದುಲ್ ರಹ್ಮಾನ್ ಮಕ್ಕಿ ಮತ್ತು ಸಯೀದ್‌ನ ವಕ್ತಾರ ಯಾಹ್ಯಾ ಮುಜಾಹಿದ್ ಶಿಕ್ಷೆಗೊಳಗಾದವರಲ್ಲಿ ಸೇರಿದ್ದಾರೆ.

‘‘ಝಫರ್ ಇಕ್ಬಾಲ್, ಅಬ್ದುಲ್ ರಹ್ಮಾನ್ ಮಕ್ಕಿ ಮತ್ತು ಯಹ್ಯಾ ಮುಜಾಹಿದ್ ವಿರುದ್ಧ 2019ರಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎರಡನೇ ಭಯೋತ್ಪಾದಕ ನಿಗ್ರಹ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅರ್ಶದ್ ಹುಸೈನ್ ಭುಟ್ಟ ಶಿಕ್ಷೆ ವಿಧಿಸಿದ್ದಾರೆ’’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)