ಅಂತಾರಾಷ್ಟ್ರೀಯ
ರೂಪಾಂತರಿತ ಕೊರೋನ ಪ್ರಭೇದ ಹೆಚ್ಚು ಮಾರಕ: ಬ್ರಿಟನ್ ಪ್ರಧಾನಿ
ವಾರ್ತಾ ಭಾರತಿ : 23 Jan, 2021

ಲಂಡನ್, ಜ. 23: ಬ್ರಿಟನ್ನಲ್ಲಿ ಮೊದಲು ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್ ಪ್ರಭೇದವು ಹೆಚ್ಚು ಮಾರಕವಾಗಿರುವ ಸಾಧ್ಯತೆಯಿದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಶುಕ್ರವಾರ ಹೇಳಿದ್ದಾರೆ.
ಈ ಪ್ರಭೇದವು ಮೂಲ ವೈರಸ್ಗಿಂತ ಹೆಚ್ಚು ಸಾಂಕ್ರಾಮಿಕ ಎನ್ನುವುದು ಈಗಾಗಲೇ ದೃಢಪಟ್ಟಿದೆ. ಅದು 30ರಿಂದ 70 ಶೇಕಡ ಹೆಚ್ಚು ಸಾಂಕ್ರಾಮಿಕವಾಗಿದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.
ಈ ಮಾದರಿಯು ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳಬಹುದು ಎಂಬ ಇಂಗಿತವನ್ನೂ 10 ಡೌನಿಂಗ್ ಸ್ಟ್ರೀಟ್ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೊರಿಸ್ ಜಾನ್ಸನ್ ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)