varthabharthi


ಕರಾವಳಿ

ಕಡಬ ಹಾಜಿ ಶರೀಫ್ ಫೈಝಿಗೆ ಸನ್ಮಾನ

ವಾರ್ತಾ ಭಾರತಿ : 23 Jan, 2021

ಪುತ್ತೂರು, ಜ.23: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಕೇಂದ್ರ ಸಮಿತಿಯ ನೂತನ ಸದಸ್ಯರಾಗಿ ಆಯ್ಕೆಯಾದ ಹಾಜಿ ಕೆ.ಪಿ.ಎಂ ಶರೀಫ್ ಫೈಝಿ ಕಡಬ ಅವರನ್ನು ಸಮಸ್ತ ಕೆರಳ ಜಂಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಸೈಯದ್ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಉದ್ಘಾಟಿಸಿದರು.

ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಅಲ್ಹಾಜ್ ಇಬ್ರಾಹೀಂ ಬಾಖವಿ ಕೆಸಿ ರೋಡು, ಉಪಾಧ್ಯಕ್ಷ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು, ಸಂಘಟನಾ ಕಾರ್ಯದರ್ಶಿ ಹಾಜಿ ಶರೀಫ್ ಫೈಝಿ ಕಡಬ. ಸದಸ್ಯರಾದ ಮೂಸಲ್ ಫೈಝಿ ಮಿತ್ತೂರು, ಕೆ.ಎಲ್. ಖಾಸಿಮಿ ಪೇರಾಳ್, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ, ಖಲೀಲುರ್ರಹ್ಮಾನ್ ದಾರಿಮಿ ಮಾರಿಪಳ್ಳ, ಉಮರ್ ದಾರಿಮಿ ಸಾಲ್ಮರ, ಎಸ್‌ಬಿ ಉಸ್ಮಾನ್ ದಾರಿಮಿ ಸೂರಲ್ಪಾಡಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಖಾಸಿಂ ದಾರಿಮಿ ತೋಡಾರು, ಇಬ್ರಾಹೀಂ ದಾರಿಮಿ ಕಡಬ, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಬಿ ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಆದಂ ದಾರಿಮಿ ಅಜ್ಜಿಕಟ್ಟೆ, ಉಮರ್ ಫೈಝಿ ಸಾಲ್ಮರ, ಅಬ್ಬಾಸ್ ಮದನಿ ಗಟ್ಟಮನೆ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಹನೀಫ್ ದಾರಿಮಿ ಸವಣೂರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)