varthabharthi


ಅಂತಾರಾಷ್ಟ್ರೀಯ

ಖ್ಯಾತ 'ಸಂದರ್ಶನ ನಿಪುಣ' ಲ್ಯಾರಿ ಕಿಂಗ್ ನಿಧನ

ವಾರ್ತಾ ಭಾರತಿ : 23 Jan, 2021

ಲಾಸ್ ಏಂಜಲೀಸ್,ಜ.23: ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಹಲವಾರು ಖ್ಯಾತನಾಮರು, ಅಂತಾರಾಷ್ಟ್ರೀಯ ನಾಯಕರು, ಹಾಲಿವುಡ್ ಸಿನಿಮಾ ತಾರೆಯರನ್ನು ತಮ್ಮ 'ಹ್ಯಾರಿ ಕಿಂಗ್ ಲೈವ್' ಶೋ ಮೂಲಕ ಸಂದರ್ಶನ ಮಾಡಿದ್ದ ಹ್ಯಾರಿ ಕಿಂಗ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಈ ಹಿಂದೆ ಕೋವಿಡ್-19 ಬಾಧಿತರಾಗಿದ್ದು, ಈ ಕುರಿತಾದಂತೆ ಹಲವಾರು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಆದರೆ ಇದೀಗ ಅವರ ಸಾವಿಗೆ ಸಮರ್ಪಕವಾದ ಕಾರಣಗಳು ಲಭ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಹಲವಾರು ಖ್ಯಾತನಾಮರನ್ನು ಸಂದರ್ಶನ ಮಾಡಿದ ಅವರು ಅಮೆರಿಕ ಮಾತ್ರವಲ್ಲದೆ ವಿಶ್ವದಾದ್ಯಂತ ಜನಪ್ರಿಯರಾಗಿದ್ದರು.  ಯಾಸಿರ್ ಅರಾಫತ್, ಕಿಂಗ್ ಹುಸೈನ್, ಮಿಖಾಯಿಲ್ ಗೋರ್ಬಚೇವ್ ದಲಾಯಿಲಾಮ ಮುಂತಾದ ಪ್ರಸಿದ್ಧ ಗತಿಗಳನ್ನು ಅವರು ಸಂದರ್ಶನ ಮಾಡಿದ್ದರು. ಒಟ್ಟು 50 ಸಾವಿರಕ್ಕೂ ಮಿಕ್ಕ ಸಂದರ್ಶನಗಳನ್ನು ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿ ಮುಗಿಸಿದ್ದರು ಎಂದು ವರದಿಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)