varthabharthi


ರಾಷ್ಟ್ರೀಯ

ಮೋದೀಜಿಯಿಂದಾಗಿ ಜಿಡಿಪಿ ʼಪ್ರಚಂಡʼ ಏರಿಕೆ ಕಂಡಿದೆ: ತೈಲ ಬೆಲೆ ಏರಿಕೆ ಕುರಿತು ರಾಹುಲ್‌ ಗಾಂಧಿ ವ್ಯಂಗ್ಯ

ವಾರ್ತಾ ಭಾರತಿ : 24 Jan, 2021

ಹೊಸದಿಲ್ಲಿ,ಜ.24: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಈ ಕುರಿತಾದಂತೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ  ಪ್ರಧಾನಿ ಮೋದಿಯ ಕುರಿತು ವ್ಯಂಗ್ಯವಾಡಿದ್ದಾರೆ. ಜನರು ಹಣದುಬ್ಬರದ ಪರಿಣಾಮವನ್ನು ಎದುರಿಸುತ್ತಿರುವ ಸಂದರ್ಭದಲ್ಲೂ ಕೇಂದ್ರ ಸರಕಾರ ಅವರಿಂದ ತೆರಿಗೆ ವಸೂಲಿ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

"ಮೋದೀಜಿ ನಮ್ಮ ದೇಶದ ಜಿಡಿಪಿಯಲ್ಲಿ ಪ್ರಚಂಡ ಏರಿಕೆಯಾಗುವಂತೆ ಮಾಡಿದ್ದಾರೆ. ಅಂದರೆ ಪೆಟ್ರೋಲ್‌, ಡೀಸೆ ಮತ್ತು ಗ್ಯಾಸ್‌ ದರಗಳಲ್ಲಿ. ದೇಶದ ಜನತೆ ಹಣದುಬ್ಬರದ ಪರಿಣಾಮವನ್ನು ಎದುರಿಸುತ್ತಿದ್ದರೆ ಕೇಂದ್ರ ಸರಕಾರ ಮಾತ್ರ ಅವರಿಂದ ತೆರಿಗೆ ಹಣ ವಸೂಲಿಮಾಡುವಲ್ಲಿ ನಿರತವಾಗಿದೆ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ಪೆಟ್ರೋಲ್‌ ಬೆಲೆಯು ದಿಲ್ಲಿಯಲ್ಲಿ ಲೀಟರ್‌ ಒಂದಕ್ಕೆ 85.70 ರೂ. ಹಾಗೂ ಮುಂಬೈಯಲ್ಲಿ 92.28ರೂ. ಆಗಿದೆ. ಡೀಸೆಲ್‌ ದರವು 75.88ರೂ. ದಿಲ್ಲಿಯಲ್ಲಿ ಮತ್ತು ರಾಷ್ಟ್ರ ರಾಜಧಾನಿ ಮುಂಬೈಯಲ್ಲಿ 82.66ರೂ. ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)