varthabharthi


ಕರಾವಳಿ

ಮಂಗಳೂರು: ಎಚ್ಐಎಫ್ ಇಂಡಿಯಾದಿಂದ ರಕ್ತದಾನ ಶಿಬಿರ

ವಾರ್ತಾ ಭಾರತಿ : 24 Jan, 2021

ಮಂಗಳೂರು, ಜ.24: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ(ಎಚ್ಐಎಫ್) ಇಂಡಿಯಾ ಇದರ ವತಿಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಇಂದು ನಗರದ ವಾಸ್ ಲೇನ್ ನಲ್ಲಿರುವ ಹೈಲ್ಯಾಂಡ್ ಎಜ್ಯುಕೇಶನಲ್ ಆ್ಯಂಡ್ ಕಲ್ಚರಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಿಬಿರದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯ ಡಾ.ಹಾಶಿರ್ ಸಫ್ವಾನ್ ಯು. ಮತ್ತು ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಮೆಡಿಕಲ್ ಆಫೀಸರ್ ಡಾ.ಸಬೀಹಾ ತಸ್ನೀಂ ರಕ್ತದಾನದ ಮಹತ್ವವನ್ನು ವಿವರಿಸಿದರು.

ಮಸ್ಜಿದುಲ್ ಇಹ್ಸಾನ್ ನ ಇಮಾಮ್ ಮೌಲಾನ ಅಲ್ತಾಫ್ ಹುಸೈನ್ ಕಿರಾಅತ್ ಪಠಿಸಿದರು.

ಎಚ್ಐಎಫ್ ಅಧ್ಯಕ್ಷ ಸಾಜಿದ್ ಎ.ಕೆ., ಕಾರ್ಯಕ್ರಮದ ಸಂಯೋಜಕ ಆದಿಲ್ ಪರ್ವೇಝ್ ಮತ್ತಿತರರು ಉಪಸ್ಥಿತರಿದ್ದರು.

ರಿಯಾಝ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮಹಿಳಾ ರಕ್ತದಾನಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಲವಾರು ಮಹಿಳೆಯರು ಭಾಗವಹಿಸಿ ರಕ್ತದಾನ ಮಾಡಿದರು.

 ಶಿಬಿರದಲ್ಲಿ ಒಟ್ಟು 139 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)