varthabharthi


ಸಿನಿಮಾ

ಮಾರ್ಚ್‌ನಲ್ಲಿ ‘ಏರೆಗಾವುಯೆ ಕಿರಿಕಿರಿ’ ತೆರೆಗೆ

ವಾರ್ತಾ ಭಾರತಿ : 24 Jan, 2021

ಮಂಗಳೂರು, ಜ.24: ರೋಶನ್ ವೇಗಸ್ ನಿರ್ಮಾಣದ ವೇಗಸ್ ಫಿಲಮ್ಸ್ ಲಾಂಛನದಲ್ಲಿ ನಿರ್ದೇಶಕ ರಾಮ್ ಶೆಟ್ಟಿಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಸ್ಯಮಯ ತುಳು ಚಿತ್ರ ‘ಏರೆಗಾವುಯೆ ಕಿರಿಕಿರಿ’ ಮಾರ್ಚ್‌ನಲ್ಲಿ ಕರಾವಳಿ ಜಿಲ್ಲಾದ್ಯಂತ ತೆರೆ ಕಾಣಲಿದೆ.

 ಮುಖ್ಯ ಪಾತ್ರದಲ್ಲಿ ಕುಸೆಲ್ದರಸೆ ನವೀನ್ ಡಿ. ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೊಳಾರ್, ಮುಹಮ್ಮದ್ ನಹೀಮ್, ರೋಶನ್ ವೇಗಸ್, ಐಶ್ವರ್ಯಾ ಹೆಗ್ಡೆ, ಶ್ರದ್ಧಾ ಸಾಲ್ಯಾನ್, ಪ್ರದೀಪ್ ಚಂದ್ರ, ಹರೀಶ್ ವಾಸು ಶೆಟ್ಟಿ, ಸಾಯಿ ಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದಿನೇಶ್ ಕೋಡಪದವು, ಸುನೀಲ್ ನೆಲ್ಲಿಗುಡ್ಡೆ, ಸರೋಜಿನಿ ಶೆಟ್ಟಿ, ಶೇಖರ್ ಭಂಡಾರಿ, ರಘು ಪಾಂಡೇಶ್ವರ, ಪವಿತ್ರಾ ಶೆಟ್ಟಿ ನಟಿಸಿದ್ದಾರೆ.

ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಸಂಗೀತ ಈ ಚಿತ್ರಕ್ಕಿದ್ದು, ಸಾಹಿತ್ಯ ಮತ್ತು ಸಂಭಾಷಣೆ ಡಿ.ಬಿ.ಸಿ ಶೇಖರ್ ಬರೆದಿದ್ದಾರೆ. ಛಾಯಾಗ್ರಹಣ ರವಿ ಚಂದನ್, ನೃತ್ಯ ಮದನ್ ಹರಿಣಿ, ಸಾಹಸ ಮಾಸ್ ಮಾದ, ಚಿತ್ರಕಥೆ ಸಚಿನ್ ಶೆಟ್ಟಿ ಕುಂಬ್ಳೆ ಹಾಗೂ ಸಹ ನಿರ್ದೇಶನ ರಾಮ್ದಾಸ್ ಸಸಿಹಿತ್ಲು ಅವರದ್ದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)