varthabharthi


ಕರಾವಳಿ

ದುರ್ಗಾಪರಮೇಶ್ವರಿ ಸಮಿತಿಯಿಂದ ಬಡಕುಟುಂಬಕ್ಕೆ ಮನೆ ಹಸ್ತಾಂತರ

ವಾರ್ತಾ ಭಾರತಿ : 24 Jan, 2021

ಮಂಗಳೂರು, ಜ.24: ಪದವಿನಂಗಡಿಯ ಮುಗ್ರೋಡಿಯಲ್ಲಿ ಬಡಕುಟುಂಬವೊಂದಕ್ಕೆ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಮುಗ್ರೋಡಿ ವತಿಯಿಂದ ನಿರ್ಮಿಸಲಾದ 7.5 ಲಕ್ಷ ರೂ. ವೆಚ್ಚದ ಮನೆ ಹಸ್ತಾಂತರ ಕಾರ್ಯಕ್ರಮ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮನಪಾ ಸದಸ್ಯರಾದ ಸಂಗೀತ ಆರ್. ನಾಯಕ್, ವನಿತಾ ಪ್ರಸಾದ್, ಜಯಾನಂದ ಅಂಚನ್ ಹಾಗೂ ಮುಗ್ರೋಡಿ ಕನ್‌ಸ್ಟ್ರಕ್ಷನ್ ಮಾಲಕ ಸುಧಾಕರ್ ಶೆಟ್ಟಿ ಮುಗ್ರೋಡಿ, ಹಿರಿಯರಾದ ಗಣಪ ಅಮಿನ್, ನಾರಯಣ ಶೆಟ್ಟಿ, ದಾಸಣ್ಣಶೆಟ್ಟಿ, ಸಮಿತಿಯ ಅಧ್ಯಕ್ಷ ದಿವಾಕರ್ ಶೆಟ್ಟಿ, ಸಮಿತಿಯ ಹಿರಿಯರು ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)