ಕೋಡಿ ಬೀಚ್ನಲ್ಲಿ ಮತ್ತೆ ಕಡಲಾಮೆ ಮೊಟ್ಟೆಗಳು ಪತ್ತೆ
ಕುಂದಾಪುರ, ಜ.24: ಕೋಡಿ ಬೀಚ್ ಬಳಿ ಮತ್ತೊಂದು ಕಡಲಾಮೆಯ 100ಕ್ಕೂ ಅಧಿಕ ಮೊಟ್ಟೆಗಳು ಇಂದು ಬೆಳಗ್ಗೆ ಪತ್ತೆಯಾಗಿವೆ. ಎರಡು ದಿನಗಳ ಹಿಂದೆ ಇಲ್ಲಿಂದ 100 ಮೀಟರ್ ದೂರದ ಬೀಚ್ನಲ್ಲಿ ಇದೇ ರೀತಿ 100ಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿದ್ದವು. ಅದರ ರಕ್ಷಣೆಗಾಗಿ ಸುತ್ತ ಬಲೆಗಳನ್ನು ಹಾಕಿ ಹ್ಯಾಚರಿ(ಮೊಟ್ಟೆ ಸಂರಕ್ಷಿಸುವ ಸ್ಥಳ) ನಿರ್ಮಾಣ ಮಾಡಲಾಗಿತ್ತು.
ಇದೀಗ ಇನ್ನೊಂದು ಮೊಟ್ಟೆಗಳ ರಾಶಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಆ ಮೊಟ್ಟೆ ಗಳನ್ನು ರಕ್ಷಿಸಿ, ಅಲ್ಲೇ ಹ್ಯಾಚರಿ ನಿರ್ಮಿಸಿದರು. ಇದು ಕೂಡ ಆಲಿವ್ ರಿಡ್ಲೇ ಪ್ರಬೇಧಕ್ಕೆ ಸೇರಿದ ಕಡಲಾಮೆಯ ಮೊಟ್ಟೆಗಳಾಗಿವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ತಿಳಿಸಿದ್ದಾರೆ.
Next Story