ಕರಾವಳಿ
ತ್ರಾಸಿ ಗೇರು ಪ್ಲಾಂಟೇಶನ್ ನಲ್ಲಿ ಬೆಂಕಿ ಅನಾಹುತ
ವಾರ್ತಾ ಭಾರತಿ : 24 Jan, 2021

ಕುಂದಾಪುರ, ಜ.24: ತ್ರಾಸಿ ಸಮೀಪದ ಮುಲ್ಲಿಕಟ್ಟೆ ಗೇರು ಪ್ಲಾಂಟೇಶನ್ ನಲ್ಲಿ ಇಂದು ಬೆಳಗ್ಗೆ ಬೆಂಕಿ ಅನಾಹುತ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಅಗ್ನಿ ಅನಾಹುತದ ಸಂಭವಿಸಿದ ಪ್ರದೇಶದ ಸಮೀಪವೇ ಪೆಟ್ರೊಲ್ ಬಂಕ್ ಇದ್ದುದರಿಂದ ಕೆಲಕಾಲ ಆತಂಕ ಉಂಟಾಗಿತ್ತು. ಕುಂದಾಪುರ ಹಾಗೂ ಬೈಂದೂರು ಅಗ್ನಿಶಾಮಕ ದಳದ ಸಿಬಂದಿಗಳು ನಿರಂತ ಕಾರ್ಯಾಚರಣೆಯ ಮೂಲಕ ಬೆಂಕಿ ನಂದಿಸಿದರು. ಇವರಿಗೆ ಸಾರ್ವಜನಿಕರು ಹಾಗೂ ಗಂಗೊಳ್ಳಿಯ 24x7 ಆಂಬ್ಯುಲೆನ್ಸ್ ಸ್ವಯಂ ಸೇವಕರು ಸಹಕರಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)