varthabharthi


ಕರಾವಳಿ

ಕುಂದಾಪುರ: ಮೂರು ಜಾನುವಾರುಗಳು ಕಳವು

ವಾರ್ತಾ ಭಾರತಿ : 24 Jan, 2021

ಕುಂದಾಪುರ, ಜ.24: ಹಾಡಿಯಲ್ಲಿ ಮೇಯಲು ಕಟ್ಟಿ ಹಾಕಿದ್ದ ಮೂರು ಜಾನುವಾರು ಕಳವಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈನುಗಾರಿಕೆ ಮಾಡಿಕೊಂಡಿರುವ ಕೊರ್ಗಿ ಗ್ರಾಮದ ಕೋಣಟ್ಟು ನಿವಾಸಿ ಶರತ್ ಶೆಟ್ಟಿ ಎಂಬವರು ಜ.20ರಂದು ಬೆಳಗ್ಗೆ 7 ಜಾನುವಾರುಗಳನ್ನು ಮನೆಯ ಕುಟುಂಬದ ಹಾಡಿಯಲ್ಲಿ ಮೇಯಲು ಕಟ್ಟಿ ಹಾಕಿದ್ದು, ಅವುಗಳಲ್ಲಿ ಮೂರು ಜಾನುವಾರುಗಳು ಸಂಜೆ ವೇಳೆ ಕಳವು ಆಗಿರುವುದಾಗಿ ದೂರಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)