ಅಂತಾರಾಷ್ಟ್ರೀಯ
ಇನ್ನೂ 10 ಮಂದಿ ನಾಪತ್ತೆ
ಚೀನಾ: ಗಣಿಯಿಂದ 11 ಕಾರ್ಮಿಕರ ರಕ್ಷಣೆ

ಬೀಜಿಂಗ್ (ಚೀನಾ), ಜ. 24: ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಎರಡು ವಾರಗಳಿಂದ ಸಿಕ್ಕಿಹಾಕಿಕೊಂಡಿರುವ 11 ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ರವಿವಾರ ನೂರಾರು ಮೀಟರ್ ಆಳದಿಂದ ಹೊರತಂದಿದ್ದಾರೆ ಎಂದು ಸಿಸಿಟಿವಿ ವರದಿ ಮಾಡಿದೆ. ಇನ್ನುಳಿದ 10 ಕಾರ್ಮಿಕರನ್ನು ಪತ್ತೆಹಚ್ಚುವುದಕ್ಕಾಗಿ ರಕ್ಷಣಾ ಕಾರ್ಯಾಚರಣೆಯನ್ನು ಸಿಬ್ಬಂದಿ ಮುಂದುವರಿಸಿದ್ದಾರೆ.
ರವಿವಾರ ಬೆಳಗ್ಗೆ 11 ಗಂಟೆಯಿಂದ ಕಾರ್ಮಿಕರನ್ನು ಮೇಲಕ್ಕೆ ತರಲಾಯಿತು. ಇದು ರಕ್ಷಣಾ ಕಾರ್ಯಾಚರಣೆಯ ಮಹತ್ವದ ಸಾಧನೆಯಾಗಿದೆ. ಮೇಲಕ್ಕೆ ತರುವಾಗ ಓರ್ವ ಕಾರ್ಮಿಕ ‘ಅತ್ಯಂತ ದುರ್ಬಲ ದೈಹಿಕ ಸ್ಥಿತಿ’ಯಲ್ಲಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಶಾನ್ಡಾಂಗ್ ಪ್ರಾಂತದ ಹುಶನ್ ಗಣಿಯಲ್ಲಿ ಜನವರಿ 10ರಂದು ಸ್ಫೋಟ ಸಂಭವಿಸಿದ ಬಳಿಕ ಅದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಳಗೆ ಸಿಕ್ಕಿ ಹಾಕಿಕೊಂಡಿದ್ದರು. ಅವರನ್ನು ರಕ್ಷಿಸುವುದಕ್ಕಾಗಿ ಪರಿಣತ ತಂಡಗಳು ಕಠಿಣ ಪರಿಸ್ಥಿತಿಗಳಲ್ಲಿ ಸೆಣಸುತ್ತಿವೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ