varthabharthi


ಕರ್ನಾಟಕ

ರಾಜ್ಯದಲ್ಲಿ ಇಂದು 573 ಮಂದಿಗೆ ಕೊರೋನ ಸೋಂಕು ದೃಢ: ನಾಲ್ವರು ಸಾವು

ವಾರ್ತಾ ಭಾರತಿ : 24 Jan, 2021

ಬೆಂಗಳೂರು, ಜ. 24: ರಾಜ್ಯದಲ್ಲಿ ರವಿವಾರ ಒಟ್ಟು 573 ಮಂದಿಗೆ ಹೊಸದಾಗಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. 401 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 9,36,051ಕ್ಕೆ ತಲುಪಿದ್ದು, ಒಟ್ಟು 12,197 ಮಂದಿ ಅಸುನೀಗಿದ್ದಾರೆ. ಸಕ್ರಿಯ ಕೊರೋನ ಸೋಂಕಿತರ ಪ್ರಕರಣಗಳ ಸಂಖ್ಯೆ 7,510ಕ್ಕೆ ಏರಿಕೆಯಾಗಿದೆ.

ಸಾವು: ಬೆಂಗಳೂರು-2, ದಕ್ಷಿಣ ಕನ್ನಡ-1 ಹಾಗೂ ಮೈಸೂರು-1 ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.

ಬೆಂಗಳೂರು ನಗರ-306, ದಕ್ಷಿಣ ಕನ್ನಡ-42, ತುಮಕೂರು-31, ಮೈಸೂರು-27, ಚಿಕ್ಕಬಳ್ಳಾಪುರ-19 ಸೇರಿದಂತೆ ಒಟ್ಟು 573 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)