varthabharthi


ರಾಷ್ಟ್ರೀಯ

ಹೊಸದಿಲ್ಲಿ ಮೆಟ್ರೋ ಸ್ಟೇಷನ್ ಬಳಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ

ವಾರ್ತಾ ಭಾರತಿ : 25 Jan, 2021

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ.24: ಇಲ್ಲಿಯ ಖಾನ್ ಮಾರ್ಕೆಟ್ ಮೆಟ್ರೋ ಸ್ಟೇಷನ್ ಬಳಿ ರವಿವಾರ ಬೆಳಗ್ಗಿನ ವೇಳೆ 6 ಮಂದಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರವಿವಾರ ಬೆಳಗ್ಗೆ ಸುಮಾರು 1 ಗಂಟೆ ವೇಳೆಗೆ ತುಘಲಕ್ ರೋಡ್‌ನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆಯೊಂದು ಬಂದಿದ್ದು, ಖಾನ್ ಮಾರ್ಕೆಟ್ ಮೆಟ್ರೋ ಸ್ಟೇಷನ್ ಬಳಿ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸುತ್ತಿದ್ದಾರೆ ಎಂದು ಕರೆ ಮಾಡಿದವರು ಹೇಳಿದ್ದರು. ಅದರಂತೆ ಪೊಲೀಸ್ ವಾಹನ ಅಲ್ಲಿಗೆ ಧಾವಿಸಿದ್ದು , ಅಲ್ಲಿ ನೀಲಿ ಬಣ್ಣದ 3 ಯುಲು ಬೈಕ್‌ನಲ್ಲಿ 3 ಮಹಿಳೆಯರು ಹಾಗೂ 3 ಯುವಕರಿದ್ದರು. ಅವರನ್ನು ಪ್ರಶ್ನಿಸಿದಾಗ ‘ ಇಂಡಿಯಾ ಗೇಟ್ ವೀಕ್ಷಿಸಲು ಬಂದಿದ್ದು ಯುಲು ಬೈಕ್‌ಗಳನ್ನು ಬಾಡಿಗೆಗೆ ಪಡೆದು ಬೈಕ್‌ರೇಸ್ ನಡೆಸಲು ನಿರ್ಧರಿಸಿದ್ದೇವೆ. 3 ತಂಡಗಳಿಗೆ ಒಂದೊಂದು ದೇಶದ ಹೆಸರಿಟ್ಟಿದ್ದು ಇದರಲ್ಲಿ ಒಂದು ತಂಡಕ್ಕೆ ಪಾಕಿಸ್ತಾನ ಎಂದು ಹೆಸರಿಟ್ಟಿದ್ದೇವೆ. ಬೈಕ್ ರೇಸ್ ಸಂದರ್ಭ ಸ್ಪರ್ಧೆಯ ಹುರುಪಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಿಸಿದ್ದೇವೆ ಅಷ್ಟೇ’ ಎಂದುತ್ತರಿಸಿದ್ದಾರೆ. ಆದರೂ ಈ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)